ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ- ಬೃಹತ್ ಮೀಲಾದ್ ಕಾನ್ಫರೆನ್ಸ್ ಯಶಸ್ವಿ

ಕುವೈತ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್ -2019 “ಹಬೀಬ್ (ಸ.ಅ) ನಮ್ಮ ಜತೆಗಿರಲಿ” ಎಂಬ ಘೋಷ ವಾಕ್ಯ ದೊಂದಿಗೆ ನವೆಂಬರ್ 1 ರ ಶುಕ್ರವಾರ ಇಂಡಿಯನ್ ಮೊಡೆಲ್ ಸ್ಕೂಲ್ (sims) ನಲ್ಲಿ ನಡೆಯಿತು.

ಸೌತ್ ಝೋನಿನ ಕಾರ್ಯದರ್ಶಿ ಶಾಹುಲ್ ಹಮೀದ್ ಸಅದಿ ಝುಹುರಿ ಉಸ್ತಾದರ ದುವಾ ದೊಂದಿಗೆ,?ರಾಷ್ಟ್ರೀಯ ಸಮಿತಿಯ ಪ್ರ. ಕಾರ್ಯದರ್ಶಿ ಝಕರಿಯಾ ಆನೇಕಲ್ ರವರು ಸ್ವಾಗತಿಸಿ,ಕಾರ್ಯಕ್ರಮದ ಉದ್ಘಾಟನೆ ಯನ್ನು ರಾಷ್ಟ್ರೀಯ ಸಮಿತಿಯ ಸದಸ್ಯರಾದ ಬಹು: ಉಮರುಲ್ ಫಾರೂಕ್ ಸಖಾಫಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ತಾಜುಲ್ ಫುಕಾಅಹ್ ಶೈಖುನಾ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಮಾತನಾಡಿ ಈದ್ ಮೀಲಾದ್ ಆಚರಣೆ ಬಗ್ಗೆ ವಿವರಿಸಿದರು. ಹಾಗು inc ಅಧ್ಯಕ್ಷರಾದ ಹಾಜಿ ಡಾ ಶೈಖ್ ಬಾವ ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಸಿಎಫ್ ನ ಸಾಂತ್ವನದ ಕೆಲಸವನ್ನು ಹಾಗೂ ಅಡ್ಯಾರ್ ಕಣ್ಣೂರ್ ಆಸ್ತಾನ ವಿಷಯದಲ್ಲಿ ಸವಿವರ ವಾಗಿ ವಿವರಿಸಿದರು.

ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದಂತ ಡಾ ಮುಹಮ್ಮದ್ ಕುಞ ಸಖಾಫಿ ಕೊಲ್ಲಂ ಮಾತನಾಡಿ ಇಸ್ಲಾಮಿನ ಚೌಕಟ್ಟಿನ ಒಳಗೆ ಇರುವಂತಹ ಆಶಯಗಳನ್ನು ವಿವರಿಸಿದರು.ಸಾಂತ್ವನ ವಿಭಾಗದ ಅಧ್ಯಕ್ಷ ಯಾಕೂಬ್ ಕಾರ್ಕಳ ಮಾತನಾಡಿ ಸಾಂತ್ವನದಲ್ಲಿ ಕೈ ಜೋಡಿಸಿ ಬಡವರಿಗೆ ಸಹಾಯ ಹಸ್ತವನ್ನು ಸಾಂತ್ವನದ ಮೂಲಕ ನೀಡಬೇಕಾಗಿ ವಿನಂತಿಸಿದರು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಕಂದಾವರ ಮತ್ತು ಸೌತ್ ಝೋನ್ ಸಮಿತಿಯ ಅಧ್ಯಕ್ಷ ಅಹ್ಮದ್ ಬಾವಾಕ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಅದೇ ರೀತಿ ರಾಷ್ಟ್ರೀಯ ಸಮಿತಿ ವತಿಯಿಂದ ತಾಜುಲ್ ಫುಕಾಹಅ ಶೈಖುನಾ ಪಿ. ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್,ಡಾ ಮುಹಮ್ಮದ್ ಕುಞ ಸಖಾಫಿ ಕೊಲ್ಲಂ ಮತ್ತು inc ಅಧ್ಯಕ್ಷರಾದ ಡಾ ಹಾಜಿ ಶೈಖ್ ಬಾವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.

ಸಾಂತ್ವನದ ಸಹಾಯನಿಧಿ ಎಂಬ ಕೂಪನ್ ನನ್ನು ಶೈಖುನಾ ಬೇಕಲ್ ಉಸ್ತಾದ್ರವರು ಯಾಕೂಬ್ ಕಾರ್ಕಳ ರವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಗೊಳಿಸಿದರು, 2020 -20 ರ ಹೊಸ ವರ್ಷದ ಕ್ಯಾಲಂಡರನ್ನು ಹಾಗು ಸೋವಿನರ್ ನ್ನು ಶೈಖುನಾ ಬೇಕಲ್ ಉಸ್ತಾದ್ ರವರು inc ಅಧ್ಯಕ್ಸ ಶೈಖ್ ಬಾವ ರಿಗೆ ಕೊಡುವ ಮುಖಾಂತರ ಬಿಡುಗಡೆ ಮಾಡಲಾಯಿತು.ಸಭೆ ಯಲ್ಲಿ Icf ರಾಷ್ಟ್ರೀಯ ಸಮಿತಿ ಅಧ್ಯಕ್ಷ ಬಹು: ಅಬ್ದುಲ್ ಹಕೀಮ್ ದಾರಿಮಿ ಉಸ್ತಾದರು ಅಶಂಸ ಭಾಷಣ ಗೈದರು ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ರವರು ಮಾತನಾಡಿ ಶುಭ ಕೋರಿದರು.

ಮೀಲಾದ್ ಕಾನ್ಫರೆನ್ಸ್ ಚೇರ್ಮನ್ ಬಹು: ಬಾದುಶಾ ಸಖಾಫಿ ಉಸ್ತಾದ್ ರವರು ಮಾತನಾಡಿ ಈದ್ ಮೀಲಾದ್ ಗೆ ಸಹಕರಿಸಿದಂತಹ ಎಲ್ಲರಿಗೂ ಅಲ್ಲಾಹು ತಕ್ಕದಾದ ಪ್ರತಿಫಲ ನೀಡಲಿ ಎಂದು ದುವಾ ಮಾಡಿ ಇಂತಹ ಕಾರ್ಯಕ್ರಮ ಗಳು ಇನ್ನು ಕೂಡ ನಡೆಯಲಿ ಎಂದು ತಮ್ಮ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದರು.

ಅಸ್ಸುಫಾ ತರಗತಿ ಯಲ್ಲಿ ಭಾಗವಹಿಸಿದ ಸದಸ್ಯರಿಗೆ ಪ್ರಮಾಣ ಪತ್ರ ನೀಡಲಾಯಿತು.ದಫ್ಫ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ವೇದಿಕೆಯಲ್ಲಿ ನಾರ್ತ್ ಝೋನಿನ ಅಧ್ಯಕ್ಷ ಜನಾಬ್ ಅಬ್ಬಾಸ್ ಬಳಂಜ ಸೌತ್ ಝೋನಿನ ಅಧ್ಯಕ್ಷ ಜನಾಬ್ ಅಹ್ಮದ್ ಬಾವಕ ರಾಷ್ಟ್ರೀಯ ಸಮಿತಿ ಸದಸ್ಯ ಬಹುಮಾನ್ಯ ಉಮರ್ ಝುಹುರಿ ಉಸ್ತಾದ್ ಸಿಟಿ ಸೆಕ್ಟರ್ ಶಿಕ್ಷಣ ಅಧ್ಯಕ್ಷ ಬಸೀರ್ ಸಖಾಫಿ ಕೊಟ್ಟ ಮುಡಿ ಟಿ ವಿ ಸ್ ಗ್ರೂಪ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು inc ಸಂಘಟನೆಯ ಕಾರ್ಯದರ್ಶಿ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದ್ ರವರು ನಿರ್ವಹಿಸಿದರು.

ವರದಿ :ಇಬ್ರಾಹಿಂ ವೇಣೂರು
ಪ್ರಚಾರ ಮತ್ತು ಪ್ರಕಾಶನ ವಿಭಾಗ
ಕುವೈತ್

Leave a Reply

Your email address will not be published. Required fields are marked *

error: Content is protected !!