janadhvani

Kannada Online News Paper

ಅಮ್ಮುಂಜೆ SSF ವತಿಯಿಂದ ಇಲಲ್ ಹಬೀಬ್ ಮೀಲಾದ್ ಜಾಥಾ

ಕೈಕಂಬ:ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ಅಮ್ಮುಂಜೆ ಸೆಕ್ಟರ್ ವತಿಯಿಂದ ಇಲಲ್ ಹಬೀಬ್ ಜಾಥಾ ಇತ್ತೀಚಿಗೆ ಉದ್ದಬೆಟ್ಟು ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭಗೊಂಡು ಬಡಕಬೈಲ್ ಜಂಕ್ಷನ್ ನಲ್ಲಿ ಸಮಾಪ್ತಿಗೊಂಡಿತು.

SYS ರಾಜ್ಯ ನಾಯಕರೂ ಅಸಾಸ್ ಸಂಸ್ಥೆಯ ಸಾರಥಿಯೂ ಆದ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರುರವರು SSF ಅಮ್ಮುಂಜೆ ಸೆಕ್ಟರ್ ಅಧ್ಯಕ್ಷರಾದ ಸೈಫುಲ್ಲಾ ಸಖಾಫಿಯವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಲುಕ್ಮಾನ್ ಸಅದಿ ಅಡ್ಯಾರುಪದವು ಸಂದೇಶ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಿದ್ದರು ಎಂದು SSF ಅಮ್ಮುಂಜೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕಲೀಲ್ ಅಬ್ಬೆಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!