janadhvani

Kannada Online News Paper

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ 124 ನೇ ರಕ್ತದಾನ ಶಿಬಿರ

ಎಸ್ಸೆಸ್ಸೆಫ್ ಕಳಂಜಿಬೈಲ್ ಯುನಿಟಿನ ಸಹಕಾರದೊಂದಿಗೆ ಎಸ್ಸೆಸ್ಸೆಫ್ ಮೂರುಗೋಳಿ ಸೆಕ್ಟರ್ ಆಯೋಜಿಸಿದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ 124 ನೇ ರಕ್ತದಾನ ಶಿಬಿರ ಮುಹಿಯುದ್ದೀನ್ ಜುಮಾ ಮಸ್ಜಿದ್ ಕಳಂಜಿಬೈಲಿನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷರಾದ ಇಬ್ರಾಹಿಂ ಸ ಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸ್ಥಳೀಯ ಖತೀಬರಾದ ಬಿ.ವೈ ಅಬ್ದುಲ್ ಹಮೀದ್ ಸ ಅದಿ ಕಾರ್ಯಕ್ರಮ ಉದ್ಘಾಟಿಸಿದರು.

ಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ, ದ.ಕ ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಕರೀಂ ಕಡ್ಕಾರ್ ಪ್ರಸ್ತಾವಿಕ ಭಾಷಣ ಮಾಡಿದರು. ರೆಡ್ ಕ್ರಾಸ್ ಕೋಡಿನೇಟರ್ ಪ್ರವೀಣ್ ಕುಮಾರ್, ಎಸ್.ವೈ.ಎಸ್ ಕಳಂಜಿಬೈಲ್ ಮಾಜಿ ಅಧ್ಯಕ್ಷ ಕೆ.ಪಿ ಬಶೀರ್ ಮದನಿ, ಎಸ್.ವೈ.ಎಸ್ ಕಳಂಜಿಬೈಲ್ ಕಾರ್ಯದರ್ಶಿ ಇಲ್ಯಾಸ್ ಸಖಾಫಿ, ಹಾಗೂ ಎಸ್ಸೆಸ್ಸೆಫ್ ಯುನಿಟ್ ಮಾಜಿ ಅಧ್ಯಕ್ಷ ಝಕರಿಯಾ ಲತೀಫಿ ಕಳಂಜಿಬೈಲ್ ಯುನಿಟ್ ಅಧ್ಯಕ್ಷ ಲತೀಫ್ ಸ ಅದಿ ಶುಭ ಹಾರೈಸಿದರು.

ಸೆಕ್ಟರ್ ವ್ಯಾಪ್ತಿಯ ಶಾಖೆಗಳಿಂದ ಬಂದ ರಕ್ತಾದಾನಿಗಳಿಂದ ಒಟ್ಟು 77 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ನಾಯಕಾರಾದ ಕೆ.ಎಸ್ ಹಕೀಂ ಕಳಂಜಿಬೈಲ್, ಮುಸ್ತಫಾ ಉರುವಾಲುಪದವು, ಇಕ್ಬಾಲ್ ಮಾಚಾರ್, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್ ಬ್ಲಡ್ ಉಸ್ತುವಾರಿ ಇಸಾಕ್ ಮದನಿ ಅಳಕ್ಕೆ, ಡಿವಿಶನ್ ನಾಯಕರಾದ ಬಾತಿಷ್ ತೆಕ್ಕಾರು, ಮೂರುಗೋಳಿ ಸೆಕ್ಟರ್ ಬ್ಲಡ್ ಉಸ್ತುವಾರಿ ಶಿಹಾಬ್ ಕಕ್ಕೆಪದವು. ಕಳಂಜಿಬೈಲ್ ಜಮಾಅತ್ ಅಧ್ಯಕ್ಷರಾದ ಉಮರ್ ಕುಂಞಿ, ಸ್ಥಳೀಯ ಎಸ್.ವೈ.ಎಸ್ ಅಧ್ಯಕ್ಷ ಕೆ.ಹೆಚ್ ಅಬೂಬಕ್ಕರ್, ಸ್ಥಳೀಯ ಮುಅಲ್ಲಿಮರಾದ ಇಸ್ಮಾಯಿಲ್ ಮದನಿ, ಅಶ್ರಫ್ ಸಖಾಫಿ ಬಟ್ಲಡ್ಕ, ದಫ್ ಸಮಿತಿ ಅಧ್ಯಕ್ಷ ಯೂಸುಫ್ ವಳಚ್ಚಿಲ್, ಜಮಾಅತರಾದ ಪಿ.ಹೆಚ್ ಅಶ್ರಫ್, ಡಿ.ಕೆ ಹಾರಿಸ್, ಪಿ.ಕೆ ಇಬ್ರಾಹಿಂ, ಕೆ.ಪಿ ಅಬೂಬಕ್ಕರ್, ಕಾಸಿಂ ಬ್ರಂಚ್, ಹಂಝ ಮುಸ್ಲಿಯಾರ್ ಬ್ರಂಚ್, ಮತ್ತು ಯುನಿಟ್ ಸದಸ್ಯರಾದ ಇರ್ಫಾದ್, ಇಮ್ರಾನ್ ಪಿ.ಹೆಚ್, ಸೈಫುಲ್ಲಾ, ನವಾಝ್ ಕೆ.ವಿ, ಮಸೂದ್ ಪಿ.ಕೆ ಹಾಗೂ ಸೆಕ್ಟರ್ ಯುನಿಟ್ ನಾಯಕರು ಉಪಸ್ಥಿತರಿದ್ದರು.

ಮೂರುಗೋಳಿ ಸೆಕ್ಟರ್ ಸೆಕ್ರೆಟರಿ ಜುನೈದ್ ತುರ್ಕಳಿಕೆ ಸ್ವಾಗತಿಸಿ, ವಂದಿಸಿದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!