ಖತರ್ ಏರ್‌ವೇಸ್-ಇಂಡಿಗೊ ಏರ್‌ಲೈನ್ಸ್‌ ನಡುವೆ ಒಪ್ಪಂದ

ದೋಹಾ: ಖತರ್‌ನ ಅಧಿಕೃತ ವಿಮಾನ ಕಂಪೆನಿಯಾದ ಕತರ್ ಏರ್‌ವೇಸ್ ಮತ್ತು ಭಾರತೀಯ ವಿಮಾನಯಾನ ಕಂಪೆನಿ ಇಂಡಿಗೊ ಏರ್‌ಲೈನ್ಸ್‌ ನಡುವೆ ವ್ಯಾಪಾರ ಪಾಲುದಾರಿಕೆಯ ಒಪ್ಪಂದವನ್ನು ಮಾಡಿಕೊಂಡಿದೆ.

ಒಪ್ಪಂದದ ಕುರಿತು ಅಧಿಕೃತ ಪ್ರಕಟಣೆಯು ಶೀಘ್ರದಲ್ಲೇ ನಡೆಯಲಿದ್ದು, ಇಂಡಿಗೊ ಕಂಪನಿಯು ಕತರ್ ಏರ್‌ವೇಸ್‌ನ ಅತ್ಯಾಧುನಿಕ ವಿಮಾನಗಳನ್ನು ಬಳಸಿ ಹೆಚ್ಚಿನ ಅಂತರ್‌ರಾಷ್ಟ್ರೀಯ ವಿಮಾನಯಾನಗಳನ್ನು ಪ್ರಾರಂಭಿಸಲಿದೆ.

ಖತರ್ ಏರ್ವೇಸ್ ಈಗಾಗಲೇ ಭಾರತೀಯ ಖಾಸಗಿ ಗಗನ ವಾಹಕ ಇಂಡಿಗೊ ಏರ್ಲೈನ್ಸ್ ಜೊತೆ ವ್ಯಾಪಾರ ಪಾಲುದಾರಿಕೆಯನ್ನು ಸ್ಥಾಪಿಸುವ ಪ್ರಯತ್ನಗಳನ್ನು ನಡೆಸಿತ್ತು, ಆದರೆ ಹಲವಾರು ಕಾರಣಗಳಿಗಾಗಿ ಅದು ವಿಳಂಬವಾಗಿತ್ತು.

ಆದರೆ, ಈ ವಿಷಯದ ಬಗ್ಗೆ ಉಭಯ ಪಕ್ಷಗಳು ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅಧಿಕೃತ ಪ್ರಕಟಣೆ ನೀಡಲಾಗುವುದು ಎಂದು ತಿಳಿದುಬಂದಿದೆ. ಖತರ್ ಏರ್ವೇಸ್‌ನ ಸಿಇಒ ಅಕ್ಬರ್ ಅಲ್ ಬೇಕರ್ ಮತ್ತು ಇಂಡಿಗೊ ಸಿಇಒ ರೊನೊ ಜಾಯ್ ದತ್ತಾ ಅವರು ಶೀಘ್ರದಲ್ಲೇ ಜಂಟಿ ಹೇಳಿಕೆ ನೀಡುವ ನಿರೀಕ್ಷೆಯಿದೆ ಎಂದು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಜೆಟ್ ಏರ್‌ವೇಸ್ ಮತ್ತು ಇತ್ತಿಹಾದ್ ಒಪ್ಪಂದದ ಮಾದರಿಯಲ್ಲಿ ಪಾಲುದಾರರಾಗಲು ಯೋಜಿಸುತ್ತಿದ್ದು, ಇದರೊಂದಿಗೆ, ದೋಹಾ ಸೇರಿದಂತೆ ಇಂಡಿಗೊ ಅಂತರ್‌ರಾಷ್ಟ್ರೀಯ ವಿಮಾನಗಳಿಗೆ ಕತರ್ ಏರ್‌ವೇಸ್‌ನ ಅತ್ಯಾಧುನಿಕ ವಿಮಾನಗಳನ್ನು ಪಡೆಯಲಿವೆ. ಇಂಡಿಗೊ ಸಹ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಖತರ್ ಏರ್‌ವೇಸ್‌‌ ‌ನ ದೀರ್ಘಕಾಲದ ಪ್ರಯತ್ನಗಳು ಅರಳುತ್ತಿವೆ. ಇಂಡಿಗೊ ಪ್ರಸ್ತುತ ವಿವಿಧ ದೇಶಗಳಲ್ಲಿ ಸುಮಾರು 60 ಸೇವೆಗಳನ್ನು ನಿರ್ವಹಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!