janadhvani

Kannada Online News Paper

ಸೌದಿ : ಡಿಸೆಂಬರ್‌ನಿಂದ ಸಿಹಿ ಪಾನೀಯಗಳಿಗೆ ಶೇ.50 ವ್ಯಾಟ್

ರಿಯಾದ್: ಸೌದಿ ಅರೇಬಿಯಾದಲ್ಲಿ ಡಿಸೆಂಬರ್‌ನಿಂದ ಸಿಹಿ ಪಾನೀಯಗಳಿಗೆ ಶೇ.50 ವ್ಯಾಟ್ ವಿಧಿಸಲಾಗುತ್ತಿದೆ. ಈ ಬಗ್ಗೆ ಝಕಾತ್ ಆದಾಯ ತೆರಿಗೆ ಪ್ರಾಧಿಕಾರ ಮಾಹಿತಿ ನೀಡಿದ್ದು, ಈಗಾಗಲೇ, ತಂಪು ಪಾನೀಯಗಳು, ಎನರ್ಜಿ ಪಾನೀಯಗಳು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಶೇ.100 ವ್ಯಾಟ್ ವಿಧಿಸಲಾಗುತ್ತದೆ.

ಡಿಸೆಂಬರ್ ಮೊದಲ ವಾರದಿಂದ ಸೌದಿ ಅರೇಬಿಯಾ ಸಿಹಿ ಪಾನೀಯಗಳ ಮೇಲೆ ಶೇಕಡಾ 50 ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ವಿಧಿಸಲಿರುವುದಾಗಿ ಪ್ರಾಧಿಕಾರ ಘೋಷಿಸಿದೆ.

ಸಕ್ಕರೆ ಸೇರಿದಂತೆ ಎಲ್ಲಾ ಸಿಹಿ ಉಪಯೋಗಿಸಿ ತಯಾರಿಸಲಾದ ಸರಕುಗಳಿಗೆ ತೆರಿಗೆ ವಿಧಿಸಲಾಗುತ್ತದೆ. ರೆಡಿ-ಟು-ಡ್ರಿಂಕ್, ಹಿಟ್ಟು ಮತ್ತು ಜೆಲ್ ಸೇರಿದಂತೆ ಎಲ್ಲಾ ರೆಡಿಮೇಡ್ ಪಾನೀಯಗಳನ್ನು ಶೇಕಡಾ 50 ರಷ್ಟು ತೆರಿಗೆ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಅಂತಹ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಪ್ರಾಧಿಕಾರದ ಉಸ್ತುವಾರಿ ಹಿರಿಯ ಲೆಕ್ಕಪರಿಶೋಧಕ ವಲೀದ್ ಬಿನ್ ಅಬ್ದುರ್ರಥಾನ್ ಅಲ್ವಕೀಲ್ ಹೇಳಿದ್ದಾರೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!