janadhvani

Kannada Online News Paper

ಕೊಡಗು ಸುನ್ನಿ ವೆಲ್ಫೇರ್ ಬೃಹತ್ ಮೀಲಾದ್ ಸಮಾವೇಶ ನವೆಂಬರ್ 8 ರಂದು ದುಬೈ ನಲ್ಲಿ

ದುಬೈ: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ “ಸಂದೇಶ ವಾಹಕರೇ ತಮಗೆ ಸಮರ್ಪಣೆ” ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶ ದುಬೈ ದೇರಾದಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ನಲ್ಲಿ ನವೆಂಬರ್ 8 ರಂದು ಶುಕ್ರವಾರ ಸಂಜೆ 6 ಘಂಟೆಗೆ ನಡೆಯಲಿದೆ. ಪ್ರಮುಖ ಆತ್ಮೀಯ ಸುಪೀವರ್ಯರೂ, ಶಿಕ್ಷಣ ತಜ್ಞರೂ ಆದ ಬದ್ರುಸ್ಸಾದಾತ್ ಸಯ್ಯದ್ ಖಲೀಲುಲ್ ಬುಖಾರಿ ತಂಙ್ಞಳ್ (ಪ್ರಧಾನ ಕಾರ್ಯದರ್ಶಿ, ಕೇರಳ ಮುಸ್ಲಿಂ ಜಮಾಅತ್) ರವರು ದುಆ ನೇತೃತ್ವವನ್ನು ನೀಡಲಿದ್ದಾರೆ.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA) ಯುಎಇ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ರವರು ಉದ್ಘಾಟಿಸಲಿದ್ದಾರೆ. ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ನಾಯಕರಾದ ಅಲಿ ಮುಸ್ಲಿಯಾರ್ ಬಹರೈನ್, ಪ್ರಮುಖ ಸಮಾಜ ಸೇವಕರೂ ಮೂರ್ನಾಡು ಮುಸ್ಲಿಂ ಜಮಾಅತ್ ಅಧ್ಯಕ್ಷರೂ ಆದ ಮಜೀದ್ ಮೂರ್ನಾಡು, ಕೊಡಗು ಪ್ರಳಯಕ್ಕೆ ಮನಮಿಡಿದು ನಿರಾಶ್ರಿತರಿಗೆ ಸೂರಿಗಾಗಿ ಸ್ಥಳಧಾನ ಮಾಡಿ ಸ್ಪಂದಿಸಿದ ಹಾಜಿ ಅಬ್ದುಲ್ಲಾ ಕೊಂಡಂಗೇರಿ, ಕೆಸಿಎಫ್ ಯುಎಇ ಅಧ್ಯಕ್ಷರಾದ ಜಲೀಲ್ ನಿಝಾಮಿ ಎಮ್ಮೆಮಾಡು, ಕೊಡಗು ಸುನ್ನಿ ವೆಲ್ಫೇರ್ ಗಲ್ಫ್ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲು ಸೇರಿದಂತೆ ಹಲವಾರು ಉಲಮಾ ಉಮರಾ ನಾಯಕರುಗಳು, ಯುಎಇಯ ಪ್ರಮುಖ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ದುಬೈನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಪಧಾಧಿಕಾರಿಗಳು ಕಾರ್ಯಕ್ರಮದಲ್ಲಿ ಕೊಡಗಿನ 400ರಷ್ಟು ಜನರು ಪಾಲ್ಗೊಳ್ಳಲಿದ್ದು, ಹುಬ್ಬುರ್ರಸೂಲ್ ಭಾಷಣ, ಪ್ರಾರ್ಥನಾ ಸಂಗಮ, ಅಭಿನಂದನಾ ಸಮಾರಂಭ, ಮೌಲೂದ್ ಪಾರಾಯಣ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಡನ್ ದಫ್ಫ್ ಪ್ರದರ್ಶನ, ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆಗಳು ನಡೆಯಲಿದ್ದು ಯುಎಇ ಯಲ್ಲಿರುವ ಎಲ್ಲಾ ಅನಿವಾಸಿಗಳು ಭಾಗವಹಿಸಿ ಸಹಕರಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದವರು

  1. ಅಬೂಬಕರ್ ಹಾಜಿ ಕೊಟ್ಟಮುಡಿ (ಅಧ್ಯಕ್ಷರು KSWA ಯುಎಇ ಸಮಿತಿ)
  2. ಅಹಮದ್ ಚಾಮಿಯಾಲ್ (ಛೇರ್ಮನ್ ಮೀಲಾದ್ ಸ್ವಾಗತ ಸಮಿತಿ)
  3. ಅರಾಫತ್ ನಾಪೋಕ್ಲು (ಫೈನಾನ್ಸ್ ಹೆಡ್, ಮೀಲಾದ್ ಸ್ವಾಗತ ಸಮಿತಿ)
  4. ಇಸ್ಮಾಯಿಲ್ ಮೂರ್ನಾಡು (ಪ್ರಧಾನ ಕಾರ್ಯದರ್ಶಿ, KSWA ಯುಎಇ ಸಮಿತಿ)
  5. ರಿಯಾಝ್ ಕೊಂಡಂಗೇರಿ (ಕನ್ವೀನರ್, ಮೀಲಾದ್ ಸ್ವಾಗತ ಸಮಿತಿ

error: Content is protected !! Not allowed copy content from janadhvani.com