‘ಸೌದಿಯಾ’ ದ ಎಲ್ಲಾ ಹಾರಾಟಗಳು ಜಿದ್ದಾದ ಹೊಸ ವಿಮಾನ ನಿಲ್ದಾಣಕ್ಕೆ ಸ್ಥಳಾಂತರ

ಜಿದ್ದಾ: ಮುಂದಿನ ಎರಡು ತಿಂಗಳಲ್ಲಿ ಸೌದಿ ಅರೇಬಿಯಾದ ವಿಮಾನ ಕಂಪನಿಯಾದ “ಸೌದಿಯಾ”ದ ಎಲ್ಲಾ ಹಾರಾಟಗಳು ಜಿದ್ದಾದ ಹೊಸ ವಿಮಾನ ನಿಲ್ದಾಣದಿಂದಲೇ ಪ್ರಾರಂಭವಾಗಲಿದೆ.ಕೋಝಿಕೋಡ್, ಕೊಚ್ಚಿ ಸೇರಿದಂತೆ ಭಾರತೀಯ ನಗರಗಳಿಗೆ ವಿಮಾನಗಳು ಡಿಸೆಂಬರ್ 10 ರಿಂದ ಹಾರಾಡಲಿವೆ.

‘ಸೌದಿಯಾ’ದ ಎಲ್ಲಾ ವಿಮಾನಗಳ ಹಾರಾಟವನ್ನು ಎರಡು ತಿಂಗಳೊಳಗೆ ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಹೊಸ ನಂಬರ್ 1 ಟರ್ಮಿನಲ್ಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಡಿಸೆಂಬರ್ 10 ರಂದು, ಭಾರತೀಯ ಸೆಕ್ಟರ್ ‌ಗೆ ಸೇರಿದ ಮುಂಬೈ, ದೆಹಲಿ, ಹೈದರಾಬಾದ್, ಕೊಝಿಕೋಡ್, ಕೊಚ್ಚಿ, ಲಕ್ನೋ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಭಾರತದ 12 ಗಮ್ಯಸ್ಥಾನ ಕೇಂದ್ರಗಳಿಗೆ ಸೌದಿಯಾ ಪ್ರವಾಸವನ್ನು ಹೊಸ ಟರ್ಮಿನಲ್ಗೆ ಸ್ಥಳಾಂತರಿಸಲಾಗುವುದು.

ಮದೀನಾ, ರಿಯಾದ್, ದಮ್ಮಾಂ, ಅಲ್ ಖಸೀಂ ಬಿಟ್ಟು ಉಳಿದ 21 ಸ್ಥಳೀಯ ವಲಯಗಳು ಮತ್ತು ಅಬುಧಾಬಿ, ಬಹ್ರೇನ್, ಮಸ್ಕತ್, ಅಮ್ಮಾನ್ ಮತ್ತು ಅಲೆಕ್ಸಾಂಡ್ರಿಯಾ ಸೇರಿದಂತೆ 21 ಅಂತರರಾಷ್ಟ್ರೀಯ ತಾಣಗಳ ಸೇವೆಗಳನ್ನು ಈಗಾಗಲೇ ಹೊಸ ಟರ್ಮಿನಲ್‌ನಲ್ಲಿ ನಿರ್ವಹಿಸಲಾಗುತ್ತಿದೆ. ಎರಡು ತಿಂಗಳಲ್ಲಿ ಹೊಸ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನ ಯಾನಗಳನ್ನು ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!