ಉಮ್ರಾ ಯಾತ್ರಿಕರಿಗೆ ಏಜೆಂಟ್ ರಹಿತ ಆನ್‌ಲೈನ್ ವೀಸಾ ಲಭ್ಯ

ರಿಯಾದ್: ಉಮ್ರಾ ಯಾತ್ರಿಕರ ವೀಸಾಗಳಿಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ಲಭ್ಯವಾಗುವಂತೆ ಆನ್‌ಲೈನ್ ಸೌಲಭ್ಯ ಏರ್ಪಡಿಸಲಾಗುತ್ತಿದೆ. ಸೌದಿ ಅರೇಬಿಯಾದ ಹಜ್ ಉಮ್ರಾ ರಾಷ್ಟ್ರೀಯ ಸಮಿತಿಯ ಪೋರ್ಟಲ್ ‘ಮಖಾಂ’ ವೆಬ್‌ಸೈಟ್ ಮೂಲಕ ವೀಸಾ ಪಡೆಯಬಹುದಾಗಿದೆ. ಅಗತ್ಯವಿರುವ ವ್ಯಕ್ತಿಯು ಆನ್‌ಲೈನ್‌ನಲ್ಲಿ ಪ್ರವಾಸೋದ್ಯಮ ಕಂಪನಿಗಳೊಂದಿಗೆ ನೇರವಾಗಿ 30 ದಿನಗಳ ಉಮ್ರಾ ವೀಸಾ ಪಡೆಯುವುದು ಸಾಧ್ಯವಾಗಲಿದೆ.

ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಯಾತ್ರಾರ್ಥಿಗಳು ಇಡೀ ದೇಶಕ್ಕೆ ಭೇಟಿ ನೀಡುವುದು ಸಾಧ್ಯವಾಗುವಂತೆ ಇತ್ತೀಚೆಗೆ ಉಮ್ರಾ ಯಾತ್ರೆಯೊಂದಿಗೆ ಪ್ರವಾಸಿ ವೀಸಾಗಳನ್ನು ಸಹ ನೀಡಲಾಗಿದೆ. ಅದೇ ಸಮಯದಲ್ಲಿ ಪ್ರವಾಸೋದ್ಯಮಕ್ಕಾಗಿ ಮಾತ್ರವಾಗಿಯೂ ವಿಸಾ ಅನುಮತಿಸಲಾಗಿದೆ. ಯಾವುದೇ ಧರ್ಮದ ಜನರು ಪ್ರವಾಸಿ ವೀಸಾಗಳಲ್ಲಿ ದೇಶಕ್ಕೆ ಬರಬಹುದು.

ದೇಶದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಪ್ರವಾಸೋದ್ಯಮ ವೀಸಾಗಳನ್ನು ಪರಿಚಯಿಸಲಾಗುತ್ತಿದ್ದು, 440 ರಿಯಾಲ್ ವೀಸಾ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿಯನ್ನು ಆನ್‌ಲೈನ್‌ನಲ್ಲಿ ಕಳುಹಿಸಿದ ನಂತರ ಐದರಿಂದ 30 ನಿಮಿಷಗಳ ಅವಧಿಯಲ್ಲಿ ವೀಸಾ ಪಡೆಯಬಹುದು. ಮುಖ್ಯ ಷರತ್ತು ಎಂದರೆ ಅರ್ಜಿದಾರರಿಗೆ 18 ವರ್ಷ ವಯಸ್ಸಾಗಿರಬೇಕು. ಅದಕ್ಕಿಂತ ಕೆಳಗಿನ ಮಕ್ಕಳೊಂದಿಗೆ ಪೋಷಕರು ಇರಬೇಕು. ಪ್ರವಾಸಿ ವೀಸಾ ಪ್ರಕಟಗೊಂಡ ಬಳಿಕ ಒಂದು ವರ್ಷದೊಳಗೆ ಸೌದಿ ಅರೇಬಿಯಾ ತಲುಪಬೇಕಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!