ಯುಎಇ: ಸಾಮಾಜಿಕ ಮಾಧ್ಯಮವನ್ನು ಬಳಸುವವರಿಗೆ ದುಬೈ ಶೈಖ್ ರಿಂದ 10 ಸಲಹೆಗಳು

ದುಬೈ: ಯುಎಇ ಯಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸುವಾಗ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಾಧಿಕಾರಿ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಹಂಚಿಕೊಂಡಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ದುಬೈ ಆಡಳಿತಗಾರ ಸಾರ್ವಜನಿಕರಿಗೆ ನೀಡಿದ ಮುಕ್ತ ಪತ್ರದ ಬಳಿಕ ಈ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ದೇಶದ ಚಿತ್ರಣವನ್ನು ಕೆಡಿಸಬಾರದು ಎಂದು ಪತ್ರದಲ್ಲಿ ಸೂಚಿಸಲಾಗಿದ್ದು, 10 ನಿರ್ದೇಶನಗಳನ್ನೂ ಹೊರಡಿಸಿದ್ದಾರೆ.

ಅನುಸರಿಸಬೇಕಾದ 10 ಸಲಹೆಗಳು

  1. ಇತರರೊಂದಿಗೆ ವ್ಯವಹರಿಸುವಾಗ ಯುಎಇಯ ಸಂಸ್ಥಾಪಕ ಪಿತ ಮತ್ತು ಅವರ ತತ್ವಗಳಿಗೆ ಕಳಂಕ ನೀಡದೆ ಉತ್ತಮ ವ್ಯಕ್ತಿಯಾಗಿರಿ.
  2. ಜ್ಞಾನ, ಸಂಸ್ಕೃತಿ ಮತ್ತು ನಾಗರಿಕತೆಯ ಗುಣಮಟ್ಟ ಮತ್ತು ಆಧುನಿಕತೆಯನ್ನು ಪ್ರತಿಬಿಂಬಿಸುವ ವ್ಯಕ್ತಿತ್ವವನ್ನು ಹೊಂದಿರಿ.
  3. ಕೆಟ್ಟ ಭಾಷೆ ಅಥವಾ ಪದಗಳನ್ನು ಬಳಸದ ವ್ಯಕ್ತಿಯಾಗಿರಿ.
  4. ಯುಕ್ತಿಯೊಂದಿಗೆ ವ್ಯವಹರಿಸುವವರಾಗಿರಿ.
  5. ಒಳ್ಳೆಯ ಪದಗಳು ಮತ್ತು ಸುಂದರವಾದ ಚಿತ್ರಣವನ್ನು ಗೌರವಿಸುವ ಮತ್ತು ಸಕಾರಾತ್ಮಕ ಆಲೋಚನೆಗಳು, ಸಂಸ್ಕೃತಿಗಳು ಮತ್ತು ಸಮಾಜದೊಂದಿಗೆ ಸಂವಹನ ನಡೆಸುವ ವ್ಯಕ್ತಿತ್ವ ನಿಮ್ಮದಾಗಿರಲಿ.
  6. ದೇಶವನ್ನು ಶ್ರೀಮಂತಗೊಳಿಸುವ ಮಾಹಿತಿ, ಆಲೋಚನೆಗಳು, ಸಾಮಾಜಿಕ ಮತ್ತು ಮಾನವೀಯ ಉಪಕ್ರಮಗಳನ್ನು ಹಂಚಿಕೊಳ್ಳುವ ಮೂಲಕ ಇತರರಿಗೆ ಸಹಾಯ ಮಾಡುವ ವ್ಯಕ್ತಿಯಾಗಿರಿ.
  7. ಅಂತರ್‌ರಾಷ್ಟ್ರೀಯ ಪರಿಸರಗಳೊಂದಿಗೆ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳಿರಿ.
  8. ಇತರ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡು ಆತ್ಮವಿಶ್ವಾಸವನ್ನು ಬೆಳೆಸುವವರಾಗಿರಿ.
  9. ಇತರರೊಂದಿಗೆ ಪ್ರೀತಿ ಮತ್ತು ಮುಕ್ತತೆಯನ್ನು ಪ್ರತಿಬಿಂಬಿಸುವಂತಾಗಿರಿ.
  10. ಜನರನ್ನು ಆಧರಿಸುವುದು ಮತ್ತು ಯಾವಾಗಲೂ ಆ ಬಗ್ಗೆ ಹೆಮ್ಮೆ ಇರುವವರಾಗಿರಿ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!