ದುಬೈ – ಅಬುಧಾಬಿಯನ್ನು ಸಂಪರ್ಕಿಸುವ ಇತ್ತಿಹಾದ್ ರೈಲು

ಅಬುಧಾಬಿ: ದುಬೈ ಮತ್ತು ಅಬುಧಾಬಿಯನ್ನು ಸಂಪರ್ಕಿಸುವ ರೈಲು ಯೋಜನೆ ಜಾರಿಯಾಗಲಿದ್ದು, ಈಗಾಗಲೇ ಘೋಷಿಸಲಾದ ಇತ್ತಿಹಾದ್ ರೈಲ್ವೆ ಯೋಜನೆಯ ಎರಡನೇ ಹಂತವಾಗಿ ಈ ಯೋಜನೆ ಪ್ರಾರಂಭವಾಗಲಿದೆ.4.4 ಬಿಲಿಯನ್ ದಿರ್ಹಂ ವೆಚ್ಚದಲ್ಲಿ ನಿರ್ಮಿಸಲಾಗುವ ಈ ರೈಲು ಸಂಪರ್ಕವು, ಇಡೀ ಯುಎಇಯನ್ನು ಸಂಪರ್ಕಿಸುವ ಇತ್ತಿಹಾದ್ ಯೋಜನೆಯ ಎರಡನೇ ಹಂತದ ಭಾಗವಾಗಲಿದೆ.

ಇತ್ತಿಹಾದ್ ರೈಲು ಮಂಡಳಿಯ ಅಧ್ಯಕ್ಷ ಶೈಖ್ ತಯ್ಯಿಬ್ ಬಿನ್ ಮುಹಮ್ಮದ್ ಬಿನ್ ಝಾಯಿದ್ ಅಲ್-ನಹ್ಯಾನ್ ಮತ್ತು ದುಬೈ ಕ್ರೌನ್ ಪ್ರಿನ್ಸ್ ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್-ಮಕ್ತೂಮ್ ಈ ಬಗ್ಗೆ ಸಭೆ ಸೇರಿ ರಾಷ್ಟ್ರೀಯ ರೈಲು ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಬ್ಬರೂ ಮಾತುಕತೆ ನಡೆಸಿದರು.

ಇತ್ತಿಹಾದ್ ರೈಲು ಯೋಜನೆಯ ಮುಂದಿನ ಹಂತ ಯುಎಇಯ ಏಳು ಎಮಿರೇಟ್‌ಗಳನ್ನು ಸಂಪರ್ಕಿಸಲಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!