ಸಾಹಸ ಪ್ರವಾಸೋದ್ಯಮಕ್ಕಾಗಿ ಜಬೆಲ್ ಜೈಸ್ ಝಿಪ್ ಲೈನ್

ರಾಸ್ ಅಲ್ ಖೈಮಾ: ಸಾಹಸ ಪ್ರವಾಸೋದ್ಯಮಕ್ಕಾಗಿ ನಿರ್ಮಿಸಲಾಗುತ್ತಿರುವ ಜಬೆಲ್ ಜೈಸ್ ಝಿಪ್ ಲೈನ್ ಟೂರ್‌ಗಾಗಿ ರಾಸ್ ಅಲ್ ಖೈಮಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರವು ಮೇಲು ಸೇತುವೆಯನ್ನು ಪ್ರಾರಂಭಿಸಿದೆ.

ಇದನ್ನು ಟೊರ್ವೆರ್ಡೆ ಅವರ ಸಹಯೋಗದಿಂದ ನಿರ್ಮಿಸಲಾಗಿದ್ದು, ಜಬೆಲ್ ಜೈಸ್ ವಯಾ ಫೆರಾಟಾ (ಪರ್ವತಾರೋಹಣ) ಮತ್ತು ಉದ್ದವಾದ ಝಿಪ್ ಲೈನ್ ಸೇರಿದಂತೆ ಅಸ್ತಿತ್ವದಲ್ಲಿರುವ ಇತರ ಯೋಜನೆಗಳೊಂದಿಗೆ ಇದು ಕೂಡ ಹೆಚ್ಚಿನ ಜನರನ್ನು ಆಕರ್ಷಿಸಲಿದೆ ಎನ್ನಲಾಗಿದೆ.

ರಾಸ್ ಅಲ್ ಖೈಮಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಸಿಇಒ ರಾಖಿ ಫಿಲಿಪ್ಸ್ ಮಾತನಾಡಿ, ಜೆಬೆಲ್ ಜೈಸ್ ಝಿಪ್ ಲೈನ್ ಪ್ರವಾಸವು ಒಟ್ಟು ಏಳು ಝಿಪ್ ಲೈನ್ ಗಳನ್ನು ಹೊಂದಿದ್ದು, ಅವುಗಳನ್ನು ಒಂಬತ್ತು ಪ್ಲಾಟ್‌ಫಾರ್ಮ್‌ಗಳು ಅಥವಾ ವೈಮಾನಿಕ ಸೇತುವೆ ಮೂಲಕ ಸಂಪರ್ಕಿಸಲಾಗಿದೆ. ಏಳು ಸೀಪ್‌ಲೈನ್‌ಗಳ ಒಟ್ಟು ಕ್ಲಸ್ಟರ್ 5 ಕಿ.ಮೀ (337 ಮೀ ನಿಂದ 1 ಕಿ.ಮೀ). ಗಂಟೆಗೆ ಸರಾಸರಿ 60 ಕಿ.ಮೀ ವೇಗದಲ್ಲಿ ಅದು ಚಲಿಸಲಿದೆ ಎಂದು ಹೇಳಿದ್ದಾರೆ.ಪ್ರವಾಸದ ಸಮಯದಲ್ಲಿ, ಫ್ಲೈಯರ್‌ಗಳು ಗಾಳಿಯ ಮೂಲಕ ಸಂಚರಿಸಲಿದ್ದಾರೆ. ಯುಎಇಯ ಅತ್ಯಂತ ಎತ್ತರದ ಸೇತುವೆಯಾದ ಇದು ಸಮುದ್ರ ಮಟ್ಟದಿಂದ 1,250 ಮೀಟರ್ ಎತ್ತರದಲ್ಲಿದೆ.

Leave a Reply

Your email address will not be published. Required fields are marked *

error: Content is protected !!