janadhvani

Kannada Online News Paper

ರಿಯಾದ್: ಸೌದಿ ಅರೇಬಿಯಾದಲ್ಲಿ ವಿದೇಶಿ ಕಾರ್ಮಿಕರಿಗೆ ಮಾತ್ರ ಲೆವಿಯಲ್ಲಿ ರಿಯಾಯಿತಿ ಅನ್ವಯವಾಗಲಿದ್ದು, ಅವಲಂಬಿತ ಲೆವಿಯಲ್ಲಿ ಬದಲಾವಣೆ ಇಲ್ಲ ಎಂದು ಸೌದಿ ಅರೇಬಿಯಾದ ಕೈಗಾರಿಕಾ ಮತ್ತು ಖನಿಜ ಸಂಪನ್ಮೂಲ ರಾಜ್ಯ ಸಚಿವ ಬಂದರ್ ಅಲ್-ಖುರೈಫ್ ಹೇಳಿದ್ದಾರೆ.

ಕುಟುಂಬದ ಲೆವಿ ಮೇಲೆಯೂ ರಿಯಾಯಿತಿ ಇದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ವಿವರಣೆಯನ್ನು ನೀಡಿದ್ದಾರೆ.

ದೇಶದ ದೇಶೀಯ ಉತ್ಪಾದನೆಯಲ್ಲಿ ಸ್ಪರ್ಧಾತ್ಮಕವಾಗಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಲೆವಿ ವಿನಾಯಿತಿ ಅನ್ವಯಿಸುವುದಿಲ್ಲ. ವಿದೇಶಿ ಕಂಪನಿಗಳೊಂದಿಗೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಈ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. ಇದರ ಲಾಭ ಐದು ವರ್ಷಗಳ ಅವಧಿಗೆ ಲಭ್ಯವಾಗಲಿದೆ. ಕೈಗಾರಿಕಾ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುವ ಹಿನ್ನೆಲೆಯಲ್ಲಿ ದೇಶೀಯ ಉದ್ಯಮವನ್ನು ಸರ್ಕಾರ ಬೆಂಬಲಿಸಲಿದೆ ಎಂದು ಬಂದರ್ ಅಲ್-ಖುರೈಫ್ ಹೇಳಿದ್ದಾರೆ.

error: Content is protected !!
%d bloggers like this: