ಸೌದಿಯ ರಸ್ತೆಗಳಲ್ಲೂ ಮುಂದಿನ ವರ್ಷಗಳಿಂದ ಟೋಲ್ ಗೇಟ್

ರಿಯಾದ್: ಸೌದಿಯ ರಸ್ತೆಗಳ ಸುಂಕ ಅಧ್ಯಯನಕ್ಕಾಗಿ ಸಲಹಾ ಕಚೇರಿಗಳನ್ನು ಸ್ಥಾಪಿಸುವುದಾಗಿ ಸಾರಿಗೆ ಸಚಿವಾಲಯ ತಿಳಿಸಿದೆ. ಸಲಹಾ ಕಚೇರಿಗಳ ವರದಿಗಳಿಗೆ ಕಾನೂನಿನಿಂದ ಅನುಮೋದಿಸುವುದರೊಂದಿಗೆ ನಿಯಮ ಜಾರಿಗೆ ಬರಲಿದೆ. ತೈಲೇತರ ಆದಾಯವನ್ನು ಹೆಚ್ಚಿಸುವ ಸಲುವಾಗಿ ಈ ಯೋಜನೆ ಎನ್ನಲಾಗಿದೆ.

ಮುಂದಿನ ವರ್ಷದ ಆರಂಭದಲ್ಲಿಯೇ ಈ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ. ವಿಷನ್ 2030 ಎಂಬ ಸಮಗ್ರ ಆರ್ಥಿಕ ಸುಧಾರಣಾ ಯೋಜನೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಆರಂಭದಲ್ಲಿ ಆರು ರಸ್ತೆಗಳಿಗೆ ಟೋಲ್ ವಿಧಿಸಲಾಗುವುದು. ಖಾಸಗಿ ವಲಯದ ಸಹಕಾರದೊಂದಿಗೆ ನಿರ್ಮಿಸಲಾಗುವ ಹೊಸ ರಸ್ತೆಗಳಿಗೆ ಶುಲ್ಕ ವಿಧಿಸಲಾಗುವುದು ಮತ್ತು ಹಳೆಯ ರಸ್ತೆಗಳ ಬದಲಿಗಾಗಿ ನಿರ್ಮಿಸಲಾದ ಮತ್ತು ನಿರ್ಮಿಸಲಾಗುವ ರಸ್ತೆಗಳಿಗೂ ವಿಧಿಸಲಾಗುವುದು.

ರಸ್ತೆಗಳಲ್ಲಿ ಉತ್ತಮ ಮತ್ತು ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಉದ್ದೇಶವೂ ಈ ಯೋಜನೆಗಿದೆ ಎನ್ನಲಾಗಿದೆ. ರಸ್ತೆಗಳಿಗೆ ಶುಲ್ಕ ವಿಧಿಸುವುದರ ಜೊತೆಗೆ ವಿಶ್ವ ದರ್ಜೆಯ ಸೇವೆ ಮತ್ತು ದುರಸ್ತಿ ಕಾಮಗಾರಿ ಒದಗಿಸಲು ರಸ್ತೆ ಆಡಳಿತ ಕಚೇರಿಗಳನ್ನು ಸ್ಥಾಪಿಸಲಾಗುವುದು. ಟೋಲ್ ಶುಲ್ಕದ ಸಾಮಾಜಿಕ, ತಾಂತ್ರಿಕ ಮತ್ತು ಪರಿಸರ ಅಂಶಗಳನ್ನು ಕನ್ಸೆಲ್ಟಿಂಗ್ ಕಚೇರಿಗಳು ಅಧ್ಯಯನ ನಡೆಸಲಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!