ದುಬೈ: ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಸ್ವದೇಶೀಕರಣ

ದುಬೈ: ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಸ್ವದೇಶೀಕರಣವನ್ನು ಕಟುವಾಗಿ ಜಾರಿಗೊಳಿಸಲಾಗುತ್ತಿದೆ. ಯುಎಇ ಉಪಾಧ್ಯಕ್ಷ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್, ಹಿಜ್ರಾ ಹೊಸ ವರ್ಷದ ಕುರಿತು ಇತ್ತೀಚೆಗೆ ಬಿಡುಗಡೆ ಮಾಡಿದ ಸಂದೇಶದಲ್ಲಿ, ಇಮಾರಾತಿಗಳ ಉದ್ಯೋಗವನ್ನು ಖಾತರಿಪಡಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದರು. ಮುಂಬರುವ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯವನ್ನು ಪ್ರಮುಖ ಅಜೆಂಡಾ ಆಗಿ ಚರ್ಚಿಸಲು ನಿರ್ಧಾರಿಸಲಾಗಿದೆ.

ಇಮಾರಾತಿನ ಪ್ರತೀ ಆಡಳಿತವು ಸ್ವದೇಶೀಕರಣ ಸಂಬಂಧಿಸಿದಂತೆ ಮೌಲ್ಯಮಾಪನ ಮಾಡಲು ಪ್ರಾರಂಭಿಸಿದೆ. ದುಬೈನ ರಾಜಕುಮಾರ ಮತ್ತು ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾದ ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಎರಡು ವಾರಗಳಲ್ಲಿ ಇದಕ್ಕೆ ಸಂಬಂಧಿತ ದಾಖಲೆಯನ್ನು ಸಿದ್ಧಪಡಿಸಲು ನಿರ್ದೇಶಿಸಿದ್ದು, ಅವರು ಸ್ವದೇಶೀಕರಣದ ಮೇಲ್ವಿಚಾರಣೆ ನಡೆಸಲಿದ್ದಾರೆ.

ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಶಾರ್ಜಾದ ಆಡಳಿತಾಧಿಕಾರಿ ಡಾ.ಶೈಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್-ಖಾಸಿಮಿ ಅವರು ‘ಸುಲ್ತಾನ್ ಅಲ್ ಖಾಸಿಮಿ ಎಮಿರೈಸೇಶನ್ ಪ್ರಾಜೆಕ್ಟ್’ ಅನ್ನು ಪ್ರಾರಂಭಿಸಿದ್ದರು, ವಿವಿಧ ಖಾಸಗಿ ಸ್ಥಾಪನೆಗಳಲ್ಲಿ ಇಮಾರಾತಿಗಳಿಗೆ ಅವಕಾಶವನ್ನು ನೀಡುವುದು ಆಡಳಿತದ ಉದ್ದೇಶವಾಗಿದೆ.

Leave a Reply

Your email address will not be published. Required fields are marked *

error: Content is protected !!