ಹಾಜಿಗಳನ್ನು ಬರಮಾಡಿಕೊಂಡು ಆರಂಭಿಸಿದ KCF,HVC ಸೇವೆ ಬೀಳ್ಕೊಡುಗೆಯೊಂದಿಗೆ ಮುಕ್ತಾಯ

ಮಕ್ಕಾ: ಈ ವರ್ಷದ ಪವಿತ್ರ ಹಜ್ಜ್ ಕರ್ಮ ನಿರ್ವಹಣೆಗಾಗಿ ಭಾರತದಿಂದ ಅಗಮಿಸಿದ್ದ ಹಜ್ಜಾಜಿಗಳ ಪ್ರಥಮ ತಂಡವನ್ನು ಕರ್ನಾಟಕ ಕಲ್ಚರಲ್ ಪೌಂಡೇಷನ್ (ಕೆ.ಸಿ.ಎಫ್) ಹಜ್ಜ್ ಸ್ವಯಂ ಸೇವಕರ ತಂಡ ಝಂ ಝಂ ನೀರು ,ಖರ್ಜೂರ ನೀಡಿ ಬಹಳ ಆತ್ಮೀಯವಾಗಿ ಬರಮಾಡಿಕೊಂಡು ಈ ವರ್ಷಧ ಹಜ್ಜ್ ಸೇವೆಗೆ ಚಾಲನೆ ನೀಡಿತ್ತು.

ಸುಮಾರು 6 ತಾಸುಗಳ ವಿಮಾನ ಯಾತ್ರೆಯಿಂದ ಆಯಾಸಗೊಂಡಿದ್ದ ಹಜ್ಜಾಜಿಗಳಿಗೆ ಗಂಜಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.ಲಗ್ಗೇಜ್ ಗಳನ್ನು ಆಯಾ ಹಾಜಿಗಳ ಕೂಠಡಿಗಳಿಗೆ ತಲುಪಿಸಿ ಕೊಡಲಾಗಿತ್ತು. ಪ್ರಥಮ ಉಮ್ರಾಕ್ಕೆ ನೇತೃತ್ವ, ಹಜ್ಜ್ ತರಗತಿ, ಅರೋಗ್ಯ ಪರೀಶಿಲನೆಗೆ ಸಹಕರಿಸಿದ HVC ತಂಡ, ಹರಮ್ ಪರಿಸರ, ಮಿನಾ, ಅರಫಾ, ಮುಝ್ದಲಿಫಾ, ಹೀಗೆ ಎಲ್ಲಾ ಕಡೆಗಳಲ್ಲಿಯೂ ವಿಷ್ವದ ವಿವಿದ ದಿಕ್ಕುಗಳಿಂದ ಆಗಮಿಸಿದ ಹಜ್ ಯಾತ್ರಿಕರಿಗೆ ಸುಮಾರು 40 ದಿವಸಗಳ ಕಾಲ ಎಲ್ಲಾ ರೀತಿಯ ಸೇವೆಯಲ್ಲಿ ನಿರತರಾಗಿ, ಅವರುಗಳ ಮನಸ್ಸನ್ನೇ ಗೆದ್ದು ಬಿಟ್ಟಿತು.

ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ನಿಸ್ವಾರ್ಥ ಸೇವೆಗೆ ಹಜ್ ಯಾತ್ರಿಕರು ಮನದಾಳದಿಂದ ಪ್ರಾರ್ಥಿಸುವುದರೊಂದಿಗೆ ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ಈ ಸೇವೆಯು ಪ್ರತೀ ವರ್ಷ ಹಜ್ ನಿರ್ವಹಿಸಲು ಆಗಮಿಸುವವರಿಗೆ ದೊರೆಯುತ್ತಿರಲಿ ಎಂದು ಶುಭ ಹಾರೈಸಿದರು.

ಸ್ವಾಗತದೊಂದಿಗೆ ಪ್ರಾರಂಭವಾದ ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ಈ ವರ್ಷದ ಸೇವೆಯು ಹಜ್ಜಾಜಿಗಳ ಬೀಳ್ಕೊಡುಗೆಯಲ್ಲಿ ಮುಕ್ತಾಯ…….

✍ಕಲಂದರ್ ಶಾಫೀ ಅಸೈಗೋಳಿ
(ಶಿಕ್ಷಣ ಇಲಾಖೆ ಕಾರ್ಯದರ್ಶಿ ಮಕ್ಕಾ ಸೆಕ್ಟರ್)

Leave a Reply

Your email address will not be published. Required fields are marked *

error: Content is protected !!