ರಿಯಾದ್: ಸೌದಿ ಏರ್ ಲೈನ್ಸ್ ಕಂಪೆನಿಯು ಜಿದ್ದಾದಿಂದ ಕೋಝಿಕ್ಕೋಡ್ ಮತ್ತು ಕೊಚ್ಚಿಗೆ ರಿಯಾಯಿತಿ ದರವನ್ನು ಪ್ರಕಟಿಸಿದ್ದು, 40 ಶೇಕಡಾ ವರೆಗೆ ರಿಯಾಯಿತಿ ದೊರೆಯಲಿದೆ. ಸೆಪ್ಟಂಬರ್ 15 ರಿಂದ ಡಿಸೆಂಬರ್ 15 ರವರೆಗೆ ಪ್ರಯಾಣಿಸುವವರಿಗೆ ಈ ರಿಯಾಯಿತಿ ಲಭ್ಯವಾಗಲಿದೆ.
ಎಕಾನಮಿ ಕ್ಲಾಸ್‌ಗಾಗಿ, ಕೋಝಿಕೋಡ್ ಮತ್ತು ಹಿಂದಿರುಗುವ ಯಾನಕ್ಕೆ 1572 ರಿಯಾಲ್ ಮತ್ತು ಕೊಚ್ಚಿನ್‌ಗೆ 1551 ರಿಯಾಲ್ ವೆಚ್ಚ ತಗುಲಲಿದೆ. ಬ್ಯುಸಿನೆಸ್ ವರ್ಗದಲ್ಲಿ, ಕೋಝಿಕ್ಕೂಡ್ ಮತ್ತು ಹಿಂದಿರುಗುವ ಟಿಕೆಟ್‌ಗೆ 2774 ರಿಯಾಲ್ ಮತ್ತು ಕೊಚ್ಚಿನ್ ರಿಟರ್ನ್ ಟಿಕೆಟ್ ದರ 2753 ರಿಯಾಲ್ ಆಗಿದೆ. ಈ ತಿಂಗಳ 31ರ ಮೊದಲು ಬುಕ್ ಮಾಡುವವರಿಗೆ ಈ ರಿಯಾಯಿತಿ ದೊರೆಯಲಿದ್ದು, ಸೆಪ್ಟೆಂಬರ್ 15 ರಿಂದ ಡಿಸೆಂಬರ್ 15 ರ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ರಿಯಾಯಿತಿ ಸಿಗುತ್ತದೆ.
ಕಳೆದ ಕೆಲವು ತಿಂಗಳುಗಳಿಂದ ಜಿದ್ದಾ ಸೇರಿದಂತೆ ಕೊಲ್ಲಿಯ ಎಲ್ಲಾ ಕ್ಷೇತ್ರಗಳಿಂದ ವಿಮಾನಯಾನ ಶುಲ್ಕವು ಭಾರೀ ಹೆಚ್ಚಳಗೊಂಡಿತ್ತು. ಟಿಕೆಟ್ ದರಗಳಲ್ಲಿನ ತೀವ್ರ ಹೆಚ್ಚಳವು ಸಾವಿರಾರು ವಲಸಿಗರನ್ನು ಪೇಚಿಗೀಡು ಮಾಡಿದ್ದವು. ಈ ಕಾರಣದಿಂದಾಗಿ, ಅನೇಕ ಜನರು ತಮ್ಮ ರಜಾದಿನಗಳನ್ನು ಸಹ ಮುಂದೂಡಿದ್ದಾರೆ. ಈ ಮಧ್ಯೆ ಸೌದಿ ಏರ್ ಲೈನ್ಸ್ ರಿಯಾಯಿತಿ ಪ್ರಕಟಿಸಿದ್ದು, ಮಲಬಾರ್‌ನ ಮೂಲದ ಜಿದ್ದಾದ ವಲಸಿಗರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು