ಸೌದಿ: ವೃತ್ತಿ ಬದಲಾವಣೆ ಹಾಗೂ ಇಖಾಮ ನವೀಕರಣಕ್ಕೆ ಅವಕಾಶ

ರಿಯಾದ್: ಪ್ರಮಾಣಪತ್ರ ಇಲ್ಲದವರು ಮತ್ತು ತಂತ್ರಜ್ಞ ವೀಸಾದಲ್ಲಿ ಸೌದಿಯಲ್ಲಿ ನೆಲೆಸಿರುವ ವಲಸಿಗರಿಗೆ ತಾತ್ಕಾಲಿಕವಾಗಿ ವೀಸಾ ನವೀಕರಿಸಲು ಮತ್ತು ವೀಸಾದಲ್ಲಿನ ವೃತ್ತಿ ಬದಲಾವಣೆಗೆ ಅವಕಾಶ ನೀಡಲಾಗುವುದು. ಮೂರು ತಿಂಗಳ ಅವಧಿಗೆಯಳಗೆ ಪ್ರಮಾಣ ಪತ್ರ ಪಡೆಯದಿದ್ದರೆ, ತಂತ್ರಜ್ಞ ವೀಸಾಗಳನ್ನು ಬದಲಾಯಿಸದಿದ್ದರೆ, ಅಥವಾ ಅವರ ವೃತ್ತಿ ಸ್ಥಿತಿಯನ್ನು ಸರಿಹೊಂದಿಸದಿದ್ದರೆ ಕ್ರಮಕ್ಕೆ ಒಳಪಡಿಸಲಾಗುತ್ತದೆ.

ಸೌದಿ ತಂತ್ರಜ್ಞ ವೃತ್ತಿಯಲ್ಲಿ ಭೇಟಿ ನೀಡುವವರಿಗೆ ಪ್ರಮಾಣಪತ್ರವಿಲ್ಲದಿದ್ದರೂ ನೋಂದಾಯಿಸುವ ಮೂಲಕ ತಮ್ಮ ಇಖಾಮಾವನ್ನು ನವೀಕರಿಸಲು ಅವಕಾಶವಿದೆ. ಆದರೆ ಮೂರು ತಿಂಗಳಲ್ಲಿ ಅಂತಹ ವೀಸಾದಲ್ಲಿರುವವರು ತಮ್ಮ ವೃತ್ತಿಯನ್ನು ಬದಲಾಯಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ತಿಂಗಳೊಳಗೆ ವೃತ್ತಿಯನ್ನು ಬದಲಾಯಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸೌದಿ ಕೌನ್ಸಿಲ್ ಆಫ್ ಇಂಜಿನಿಯರ್ಸ್ ಹೇಳಿದೆ. ಅಸ್ತಿತ್ವದಲ್ಲಿರುವ ಇಖಾಮಾ ನವೀಕರಣವನ್ನು ಮುಕ್ತವಾಗಿರಿಸುವ ಕಾರಣಕ್ಕಾಗಿ ಮೂರು ತಿಂಗಳ ಗಡುವು ನೀಡಲಾಗಿದ್ದು, ಇಖಾಮಾ ನವೀಕರಿಸಲು ತಾತ್ಕಾಲಿಕ ಸದಸ್ಯತ್ವವನ್ನು ನೀಡಲಾಗುತ್ತದೆ.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ 56 ವೃತ್ತಿಪರರ ಇಖಾಮಾ ನವೀಕರಣಕ್ಕಾಗಿ ಕೌನ್ಸಿಲ್ ಆಫ್ ಇಂಜಿನಿಯರ್ಸ್ ಸದಸ್ಯತ್ವವು ಈ ಹಿಂದೆ ಕಡ್ಡಾಯವಾಗಿತ್ತು. ಪರಿಣಾಮವಾಗಿ, ತಂತ್ರಜ್ಞರು ಸೇರಿದಂತೆ 56 ವೃತ್ತಿಪರರಿಗೆ ತಮ್ಮ ವೀಸಾಗಳನ್ನು ನವೀಕರಿಸಲು ತೊಂದರೆ ಅನುಭವಿಸಬೇಕಾಗಿದ್ದವು. ಮೂರು ತಿಂಗಳಲ್ಲಿ ಇಖಾಮಾವನ್ನು ನವೀಕರಿಸುವ ಮತ್ತು ವೀಸಾದ ವೃತ್ತಿಯನ್ನು ಬದಲಾಯಿಸುವ ಅನುಮೋದನೆಯೊಂದಿಗೆ, ಕನಿಷ್ಠ ಕೆಲವು ವಿದೇಶಿಯರು ಈಗ ಸಮಸ್ಯೆಯನ್ನು ಪರಿಹರಿಸುವ ಪ್ರಕ್ರಿಯೆಯಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!