janadhvani

Kannada Online News Paper

ಬಿಜೆಪಿ ಸರ್ಕಾರದ ಸಚಿವರಾಗಿ 17 ಮಂದಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು,ಆ.20: ಬಿಜೆಪಿ ಸರ್ಕಾರದ ನೂತನ ಸಚಿವರಾಗಿ 17 ಮಂದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.17 ಮಂದಿಯೂ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ವಜುಭಾಯ್‌ ವಾಲಾ ಅವರು ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ರಾಜ್ಯ ನಾಯಕರು, ನೂತನ ಸಚಿವರ ಸಂಬಂಧಿಗಳು, ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಮೊದಲಿಗೆ ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಕೆ.ಎಸ್‌ .ಈಶ್ವರಪ್ಪ, ಆರ್‌. ಅಶೋಕ, ಜಗದೀಶ್‌ ಶೆಟ್ಟರ್‌ ಪ್ರಮಾಣ ವಚನ ಪಡೆದರು.

ಸಚಿವರ ಪಟ್ಟಿ

-ಗೋವಿಂದ ಕಾರಜೋಳ
-ಅಶ್ವತ್ಥ ನಾರಾಯಣ
-ಲಕ್ಷ್ಮಣ ಸವದಿ
-ಕೆ.ಎಸ್‌ .ಈಶ್ವರಪ್ಪ
-ಆರ್‌. ಅಶೋಕ
-ಜಗದೀಶ್‌ ಶೆಟ್ಟರ್‌
-ಶ್ರೀರಾಮುಲು
-ಎಸ್‌. ಸುರೇಶ್‌ ಕುಮಾರ್‌
-ವಿ.ಸೋಮಣ್ಣ
-ಸಿ.ಟಿ ರವಿ
-ಬಸವರಾಜ ಬೊಮ್ಮಾಯಿ
-ಕೋಟ ಶ್ರೀನಿವಾಸ ಪೂಜಾರಿ
-ಜಿ.ಸಿ ಮಾಧುಸ್ವಾಮಿ
-ಚಂದ್ರಕಾಂತ ಪಾಟೀಲ್‌
-ಎಚ್‌. ನಾಗೇಶ್‌
-ಪ್ರಭು ಚೌಹಾಣ್‌
-ಶಶಿಕಲಾ ಜೊಲ್ಲೆ

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!