janadhvani

Kannada Online News Paper

ದುಬೈಗೆ ಪ್ರವಾಸಿಗಳ ಪ್ರವಾಹ-6 ತಿಂಗಳಲ್ಲೇ 84 ಲಕ್ಷ ಸಂದರ್ಶಕರು

ದುಬೈ: ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಮೊದಲ ಆರು ತಿಂಗಳಲ್ಲಿ 83.6 ಲಕ್ಷ ಪ್ರವಾಸಿಗರು ದುಬೈಗೆ ಆಗಮಿಸಿದ್ದಾರೆ. ಇಲಾಖೆ ಬಿಡುಗಡೆ ಮಾಡಿದ ವರದಿಗಳ ಪ್ರಕಾರ, ಸಂದರ್ಶಕರ ಸಂಖ್ಯೆ ಹಿಂದಿನ ವರ್ಷಕ್ಕಿಂತ ಮೂರು ಶೇಕಡಾದಷ್ಟು ಹೆಚ್ಚಾಗಿದೆ. ಈ ವರ್ಷ ಅತಿ ಹೆಚ್ಚು ಸಂದರ್ಶಕರು ಭಾರತದಿಂದ (9,97,000)ಬಂದಿದ್ದು, ಸೌದಿ ಅರೇಬಿಯಾ ಎರಡನೇ (7,55,000) ಸ್ಥಾನದಲ್ಲಿದೆ. ಹಬ್ಬದ ರಜಾದಿನಗಳಲ್ಲಿ ಭೇಟಿ ನೀಡುವವರು ಶೇಕಡಾ 4.9 ರಷ್ಟು ಹೆಚ್ಚಾಗಿದ್ದಾರೆ.

ಯುಕೆ (5,86,000) ಮತ್ತು ಚೀನಾ (5,01,000) ಅತಿ ಹೆಚ್ಚು ಭೇಟಿ ನೀಡಿದ ದೇಶಗಳಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಒಮಾನ್‌ನಿಂದ 499,000 ಸಂದರ್ಶಕರು ಆಗಮಿಸಿದ್ದಾರೆ. ವಿಸ ಆನ್ ಅರೈವಲ್ ವ್ಯವಸ್ಥೆಯು ಸಂದರ್ಶಕರ ಸಂಖ್ಯೆಯಲ್ಲಿ ಹೆಚ್ಚಾಗುವಂತೆ ಮಾಡಿದೆ ಎಂದು ದುಬೈ ಪ್ರವಾಸೋದ್ಯಮ ನಿರ್ದೇಶಕ ಹೆಲಾಲ್ ಸಯೀದ್ ಅಲ್ಮಾರಿ ಹೇಳಿದ್ದಾರೆ.

ದುಬೈನ ಹೋಟೆಲ್ ಉದ್ಯಮ ಕ್ಷೇತ್ರದ ಬೆಳವಣಿಗೆಯೂ ಹೆಚ್ಚಾಗಿದ್ದು, ಇದು ಕಳೆದ ವರ್ಷಕ್ಕಿಂತ ಐದು ಶೇಕಡಾ ಹೆಚ್ಚಳವಾಗಿದೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!