ಹರಮ್ ಮಸೀದಿಯ ಸ್ವಚ್ಛತೆ ಮತ್ತು ಸುಗಂಧವನ್ನು ಹೇಗೆ ಕಾಪಾಡುತ್ತಾರೆ ಗೊತ್ತೇ?

ಮಕ್ಕಾ: ಮಕ್ಕಾದ ಹರಮ್ ಮಸೀದಿಯ ಶುಚೀಕರಣ ಮತ್ತು ಸುಗಂಧ ಹಚ್ಚುವ ಕಾರ್ಯಗಳನ್ನು ಅತ್ಯಂತ ಮಹತ್ವಪೂರ್ಣವಾಗಿ ಹರಮ್ ಕಾರ್ಯಾಲಯ ನಿರ್ವಹಿಸುತ್ತಿದೆ. ಹರಮ್ ಮಸೀದಿಯ ಶಾಶ್ವತ ಸ್ವಚ್ಛತೆ ಮತ್ತು ಸುಗಂದವು ಪ್ರತಿಯೊಬ್ಬ ವಿಶ್ವಾಸಿಯ ಮನಸ್ಸಿನಲ್ಲಿ ಸದಾ ಉಳಿಯುತ್ತದೆ.

ಎಷ್ಟೋ ಕಾರ್ಮಿಕರ ಕಠಿಣ ಪರಿಶ್ರದ ಫಲ, ಪ್ರಾರ್ಥಿಸಲು ಸುಂದರವಾದ ಮತ್ತು ಸ್ವಚ್ಛವಾದ ಸ್ಥಳದ ಹಿಂದೆ ಇದೆ. ಅನೇಕ ಜನರು ಮಸೀದಿಯಲ್ಲಿ ನಮಾಝ್ ನಿರ್ವಹಣೆಯಲ್ಲಿ ಇರುವಾಗಲೇ, ಅವರ ಪ್ರಾರ್ಥನೆಗೆ ತೊಂದರೆಯಾಗದಂತಹ ರೀತಿಯಲ್ಲಿ ಚಟುವಟಿಕೆಗಳನ್ನು ಮಾಡುತ್ತಾರೆ. ಹರಮ್ ಮಸೀದಿ ಸ್ವಚ್ಛಗೊಳಿಸುವ ಕೆಲಸದಲ್ಲಿ 4,000 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಮಕ್ಕಾದ ಪವಿತ್ರ ಮಸೀದಿಯಲ್ಲಿ ಸ್ವಚ್ಛಗೊಳಿಸಲು ಪ್ರತಿದಿನ ಸುಮಾರು 3,000 ಲೀಟರ್ ಶುಚಿಗೊಳಿಸುವ ಉತ್ಪನ್ನಗಳನ್ನು ಬಳಸಲಾಗುತ್ತದೆ. ಇದಲ್ಲದೆ, 600 ಲೀಟರ್ ರೋಸ್ ವಾಟರ್ ಅನ್ನು ಹರಮ್ ಶರೀಫಿನಲ್ಲಿ ಸುಗಂಧ ಲೇಪಕ್ಕಾಗಿ ಬಳಸಲಾಗುತ್ತದೆ. ಮಸೀದಿಯ ಒಳಗೆ ಮತ್ತು ಸುತ್ತಲೂ ದಿನಕ್ಕೆ ನಾಲ್ಕು ಬಾರಿ ಸ್ವಚ್ಛ ಗೊಳಿಸಲಾಗುತ್ತದೆ. ಮಸೀದಿಯ ಒಳಭಾಗ ಮತ್ತು ಹೊರಭಾಗವನ್ನು ಸ್ವಚ್ಛ ಗೊಳಿಸಲು ಪ್ರತಿದಿನ 4,800 ಕ್ಕೂ ಹೆಚ್ಚು ಉಪಕರಣಗಳು ಮತ್ತು ಯಂತ್ರಗಳನ್ನು ಬಳಸಲಾಗುತ್ತದೆ

Leave a Reply

Your email address will not be published. Required fields are marked *

error: Content is protected !!