janadhvani

Kannada Online News Paper

ಆರೋಗ್ಯ ವಲಯದಲ್ಲಿ ವಿದೇಶೀಯರ ನೇಮಕಕ್ಕೆ ಅನುಮತಿ

ಕುವೈತ್ ನಗರ: ಖಾಲಿ ಇರುವ ಹುದ್ದೆಗಳಿಗೆ ವಿದೇಶಿಯರನ್ನು ನೇಮಕಗೊಳಿಸುವ ಸಲುವಾಗಿ ಏರ್ಪಡಿಸಲಾಗಿದ್ದ ನಿಷೇಧವನ್ನು ಕುವೈತ್ ಆರೋಗ್ಯ ಸಚಿವಾಲಯ ಹಿಂತೆಗೆದುಕೊಂಡಿದೆ. ನಾಗರಿಕ ಸೇವಾ ಆಯೋಗ ಈ ಬಗ್ಗೆ ಆದೇಶ ಹೊರಡಿಸಿದೆ. ಖಾಸಗೀಕರಣದ ಭಾಗವಾಗಿ ವಿದೇಶಿ ಪ್ರಜೆಗಳ ಸೇರ್ಪಡೆಯನ್ನು ನಿಷೇಧಿಸಲಾಗಿತ್ತು.

ಆರೋಗ್ಯ ಸಚಿವಾಲಯವು ದೇಶೀಯ ಅರ್ಹ ಸಿಬ್ಬಂದಿಯನ್ನು ಪಡೆಯಲು ಸಾಧ್ಯವಾಗದ ಕಾರಣ ನಿಷೇಧವನ್ನು ಹಿಂಪಡೆಯಲಾಯಿತು. 42 ವೈದ್ಯರು, ಐದು ಫಾರ್ಮಸಿಸ್ಟ್‌ಗಳು, 13 ತಂತ್ರಜ್ಞರು ಮತ್ತು 133 ದಾದಿಯರು ಸೇರಿದಂತೆ 193 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ವಿದೇಶಿಯರನ್ನು ನೇಮಿಸಲು ನಾಗರಿಕ ಸೇವಾ ಆಯೋಗವು ಆರೋಗ್ಯ ಸಚಿವಾಲಯಕ್ಕೆ ಅಧಿಕಾರ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದೆ ಶಿಕ್ಷಣ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳು ಸ್ವದೇಶೀಕರಣದಿಂದ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದ್ದವು. ಸ್ಥಳೀಯರು ಲಭ್ಯವಾಗದೆ ಅವರ ದೈನಂದಿನ ಕೆಲಸಕ್ಕೆ ಅಡ್ಡಿಯಾಗಲಿದೆ ಎಂಬುದು ಅವರ ವಾದವಾಗಿತ್ತು. ನಾಗರಿಕ ಸೇವಾ ಆಯೋಗದ ಪ್ರಕಾರ, ಸ್ಥಳೀಯ ಜನರಿಗೆ ಹಂತಹಂತವಾಗಿ ತರಬೇತಿ ನೀಡಿ ಅವರನ್ನು ಸಿದ್ದ ಪಡಿಸಬೇಕು ಎಂಬುದು ನಾಗರಿಕ ಸೇವಾ ಆಯೋಗದ ಅಪೇಕ್ಷೆಯಾಗಿತ್ತು. ಮುಂದಿನ ಐದು ವರ್ಷಗಳಲ್ಲಿ ಸರ್ಕಾರವು ಸಂಪೂರ್ಣ ದೇಶೀಕರಣ ಜಾರಿಗೆ ತರಬೇಕೆಂಬುದು ಅಧಿಕಾರಿಗಳ ಗುರಿಯಾಗಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com