ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ ಉಮ್ರಾ ವಿಸ ಲಭ್ಯವಾಗಲಿರುವ ಯೊಜನೆ ಜಾರಿಗೆ

ಮಕ್ಕಾ: ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ ಉಮ್ರಾ ವಿಸ ಲಭ್ಯವಾಗಲಿರುವ ಯೊಜನೆ ಜಾರಿಗೆ ತರಲು ಸೌದಿ ಅರೇಬಿಯಾ ಮುಂದಾಗಿದ್ದು, ಇದಕ್ಕಾಗಿ ಆನ್ ಲೈನ್ ವಿಸಾ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುವುದು ಎಂದು ಹಜ್- ಉಮ್ರಾ ಸಚಿವಾಲಯ ತಿಳಿಸಿದೆ.

ಹಜ್ ಸೀಸನ್ ಮುಗಿದ ಬಳಿಕ ಉಮ್ರಾ ಸೀಸನ್ ಪ್ರಾರಂಭಗೊಂಡ ಬಳಿಕ ಈ ಬಗ್ಗೆ ಘೋಷಿಸಲಾಗಿದೆ. ಸೌದಿ ದೂತವಾಸ ಅಥವಾ ಕಾನ್ಸುಲೇಟ್‌ಗೆ ತೆರಳದೆ ನೇರವಾಗಿ ಆನ್ ಲೈನ್ ಮೂಲಕ ವಿಸಾ ಪಡೆಯಬಹುದಾದ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ಅರ್ಜಿ ಸಲ್ಲಿಸುವ ವೇಳೆ ಅವಶ್ಯಕ ದಾಖಲೆಗಳನ್ನು ನೀಡಬೇಕು. ಪರಿಶೀಲನೆ ಬಳಿಕ 24 ಗಂಟೆಗಳ ಒಳಗಾಗಿ ಈ ಯೋಜನೆ ಮೂಲಕ ವಿಸಾ ಜಾರಿಯಾಗಲಿದೆ ಎಂದು ಸಂಬಂಧಿತ ಸಚಿವಾಲಯದ ಅಂಡರ್ ಸೆಕ್ರೆಟರಿ ಅಬ್ದುಲ್ ಅಝೀಝ್ ವಾಸನ್ ಹೇಳಿದ್ದಾರೆ.

ಈ ಋತುವಿನಲ್ಲೇ ಯೋಜನೆ ಜಾರಿಯಾಗಲಿದ್ದು, ಒಂದು ಕೋಟಿ ಉಮ್ರಾ ಯಾತ್ರಾರ್ಥಿಗಳನ್ನು ನಿರೀಕ್ಷಿಸಲಾಗಿದೆ. ಉಮ್ರಾ ಯಾತ್ರಿಕರಾಗಿ ತಲುಪುವವರಿಗೆ ಸೌದಿಯಾದ್ಯಂತ ಸಂಚಿರಿಸುವ ಅನುಮತಿಯನ್ನು ಈ ಹಿಂದೆಯೇ ನೀಡಲಾಗಿತ್ತು. ಹಿಂದೆ ಜಿದ್ದಾ, ಮಕ್ಕಾ, ಮದೀನಾಗಳಲ್ಲಿ ಮಾತ್ರ ಸಂಚರಿಸುವ ಅನುಮತಿ ನೀಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!