janadhvani

Kannada Online News Paper

ಊರಿಗೆ ಮರಳುತ್ತಿರುವ ಹಜ್ಜಾಜ್‌ಗಳು- ಜಿದ್ದಾ, ಮದೀನಾ ವಿಮಾನ ನಿಲ್ದಾಣಗಳು ಜನನಿಬಿಡ

ಸೌದಿ: ಹಜ್, ಮದೀನಾ ಸಂದರ್ಶನದ ಬಳಿಕ ಹಜ್ಜಾಜ್‌ಗಳು ಊರಿಗೆ ಮರಳುವ ಸಲುವಾಗಿ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಲಾಗಿದೆ. ಜಿದ್ದಾ ಮತ್ತು ಮದೀನಾ ವಿಮಾನ ನಿಲ್ದಾಣಗಳಲ್ಲಿ ಸಿಬ್ಬಂದಿಯನ್ನು ನೇಮಿಸಲಾಗಿದೆ.

ನಾಗರಿಕ ವಿಮಾನಯಾನ ಪ್ರಾಧಿಕಾರವು ಯಾತ್ರಿಕರಿಗೆ ಸ್ಥಳಾವಕಾಶ, ಪ್ರಕ್ರಿಯೆಯನ್ನು ವೇಗಗೊಳಿಸಲು, ಉತ್ತಮ ಸೇವೆಗಳನ್ನು ಒದಗಿಸಲು ಮತ್ತು ಮರಳಲು ಅನುಕೂಲವಾಗುವಂತೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿದೆ.ಹಾಜಿಗಳು ಹಿಂದಿರುಗುವ ಪ್ರಯಾಣದಲ್ಲಿ, ವಿಮಾನ ನಿಲ್ದಾಣಗಳು ಕಿಕ್ಕಿರಿದು ತುಂಬಿರುತ್ತವೆ.

ಸುಮಾರು 12,000 ಉದ್ಯೋಗಿಗಳು ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಮತ್ತು ಮದೀನಾ ಪ್ರಿನ್ಸ್ ಮುಹಮ್ಮದ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀರ್ಥಯಾತ್ರಿಕರ ಸೇವೆಗಾಗಿ ಕೆಲಸ ಮಾಡುತ್ತಾರೆ. ಜಿದ್ದಾದ ವಿಮಾನ ನಿಲ್ದಾಣದಲ್ಲಿ, ವಿವಿಧ ಇಲಾಖೆಗಳ ಅಡಿಯಲ್ಲಿ 7000 ಸಿಬ್ಬಂದಿ ಮತ್ತು ಮದೀನಾ ವಿಮಾನ ನಿಲ್ದಾಣದಲ್ಲಿ 5000 ಸಿಬ್ಬಂದಿಗಳು ಕಾರ್ಯಾಚರಿಸುತ್ತಿದ್ದಾರೆ.

ಜಿದ್ದಾ ವಿಮಾನ ನಿಲ್ದಾಣವು ಹದಿನಾಲ್ಕು ಹಜ್ ಟರ್ಮಿನಲ್ ಗಳನ್ನು ಹೊಂದಿದೆ. ಹಜ್ ವಿಮಾನಗಳು ಜಿದ್ದಾ ಮತ್ತು ಮದೀನಾದಿಂದ ಮುಹರ್ರಂ 15 ರ ವರೆಗೆ ಹಿಂತಿರುಗಲಿದೆ. ಕೊನೆಯ ಹಜ್ ವಿಮಾನ ಹಿಂತಿರುಗುವವರೆಗೆ ಹಜ್ ಟರ್ಮಿನಲ್‌ಗಳು ಕಾರ್ಯನಿರ್ವಹಿಸಲಿವೆ. ಸುಮಾರು ಒಂಬತ್ತುವರೆ ಮಿಲಿಯನ್ ವಿದೇಶಿ ಯಾತ್ರಿಕರು ಜಿದ್ದಾ ವಿಮಾನ ನಿಲ್ದಾಣದ ಮೂಲಕ ಊರಿಗೆ ಮರಳುತ್ತಾರೆ. ಮೊದಲ ವಾರದೊಳಗೆ ಮೂರು ಲಕ್ಷ ಹಾಜಿಗಳು ಮರಳಲಿದ್ದಾರೆ.

ಮರಳುವ ಹಜ್ಜಾಜ್‌ಗಳನ್ನು ಸ್ವೀಕರಿಸಲು ಮದೀನಾ ವಿಮಾನ ನಿಲ್ದಾಣದಲ್ಲಿ ಮೂರು ಟರ್ಮಿನಲ್‌ಗಳನ್ನು ಸ್ಥಾಪಿಸಲಾಗಿದೆ.

error: Content is protected !! Not allowed copy content from janadhvani.com