ವೋಟರ್ ಐಡಿಗೆ ಆಧಾರ್ ಜೋಡಣೆ ಕಡ್ಡಾಯ-ಕಾನೂನು ಸಚಿವಾಲಯಕ್ಕೆ ಪತ್ರ

ನವದೆಹಲಿ(ಆಗಸ್ಟ್.18): ವೋಟರ್ ಐಡಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಮಾಡಿ ಎಂದು ಚುನಾವಣಾ ಆಯೋಗವು ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ. ಸದ್ಯ ದೇಶಾದ್ಯಂತ ನಕಲಿ ವೋಟರ್ ಐಡಿಗಳ ದಂಧೆ ನಡೆಯುತ್ತಿದೆ. ಇಲ್ಲಿನ ಜನ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುತ್ತಾರೆ.ಈ ನಕಲಿ ವೋಟರ್ ಐಡಿಗಳ ಜಾಲವನ್ನು ತಪ್ಪಿಸಲು ಇದು ಅನಿವಾರ್ಯ.

ಕೂಡಲೇ ವೋಟರ್ ಐಡಿಗೆ ಆಧಾರ್ ಜೋಡಣೆ ಮಾಡುವಂತ ಕಾನೂನು ತನ್ನಿ ಎಂದು ಆಯೋಗ ಪತ್ರದಲ್ಲಿ ಬರೆದಿದೆ.ಇನ್ನು ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವ ವೇಳೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ ಮಾಡಬೇಕು. ಈ ಮೂಲಕ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದಿರುವ ಜನರಿಗೆ ಬುದ್ಧಿ ಕಲಿಸಬೇಕು. ಇದಕ್ಕಾಗಿ ಕಾನೂನು ಬದಲಾವಣೆ ತರಬೇಕು. ಸಂಸತ್ನಲ್ಲಿ ಈ ಕಾಯ್ದೆಗೆ ಜನಪ್ರತಿನಿಧಿಗಳು ತಿದ್ದುಪಡಿ ತರಬೇಕು’ ಎಂದು ಆಯೋಗವು ಒತ್ತಾಯಿಸಿದೆ.

ಚುನಾವಣೆಗಳಲ್ಲಿ ನಕಲಿ ಮತದಾನಕ್ಕೆ ಕಡಿವಾಣ ಹಾಕಲು ಕೇಂದ್ರ ಚುನಾವಣಾ ಆಯೋಗ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಮತದಾರರ ಗುರುತಿನ ಚೀಟಿಗೆ 12 ಸಂಖ್ಯೆಗಳ ‘ಆಧಾರ್’ ಜೋಡಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!