janadhvani

Kannada Online News Paper

ವಾಟ್ಸಪ್ ಫಿಂಗರ್ ಪ್ರಿಂಟ್ ಲಾಕ್ ಫೀಚರ್- ಸೆಟ್ಟಿಂಗ್ ಹೇಗೆ?

ಬೆಂಗಳೂರು: ಫೇಸ್‍ಬುಕ್ ಮಾಲೀಕತ್ವದ ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಇನ್ಮುಂದೆ ಫಿಂಗರ್ ಪ್ರಿಂಟ್ ಮೂಲಕ ಓಪನ್ ಮಾಡಬಹುದು. ವಾಟ್ಸಪ್ ಆಂಡ್ರಾಯ್ಡ್ ಬಳಕೆದಾರರಿಗೆ ಈಗ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ನೀಡಿದೆ.

ಈ ಮೊದಲು ಐಓಎಸ್ ಬಳಕೆದಾರರಿಗೆ ವಾಟ್ಸಪ್ ಈ ವೈಶಿಷ್ಟ್ಯವನ್ನು ನೀಡಿತ್ತು. ಆದರೆ ಈಗ ಆಂಡ್ರಾಯ್ಡ್ ಬೀಟಾ ಅವೃತ್ತಿಯ ಅಪ್ಲಿಕೇಶನ್ ಬಳಸುವ ಬಳಕೆದಾರರಿಗೆ ಈ ಫೀಚರ್ ನೀಡಿದೆ.

ಬಳಸುವುದು ಹೇಗೆ?
ವಾಟ್ಸಪ್ ಅಪ್ಲಿಕೇಶನ್ ಹೋಗಿ ಅಲ್ಲಿ ಕಾಣುತ್ತಿರುವ ಮೂರು ಚುಕ್ಕೆಯನ್ನು ಒತ್ತಿ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ನಂತರ ಅಕೌಂಟ್ ಹೋಗಿ. ಬಳಿಕ ಪ್ರೈವೆಸಿ ಹೋದಾಗ ಕೆಳಗಡೆ ಫಿಂಗರ್ ಪ್ರಿಂಟ್ ಲಾಕ್ ಕಾಣುತ್ತದೆ.

ಇಲ್ಲಿ ಅನ್ ಲಾಕ್ ಆಯ್ಕೆಯನ್ನು ಎನೆಬಲ್ ಮಾಡಿ. ಎನೆಬಲ್ ಮಾಡಿದ ಕೂಡಲೇ ಅಲ್ಲಿ ಆಟೋ ಮ್ಯಾಟಿಕ್ ಲಾಕ್ ಎಷ್ಟು ಸಮಯದ ಒಳಗಡೆ ಆಗಬೇಕು ಎನ್ನುವ ಆಯ್ಕೆಯನ್ನು ನಿಮ್ಮ ಮುಂದೆ ತೋರಿಸುತ್ತದೆ. ಇಮಿಡಿಯೆಟ್ಲಿ ಅಥವಾ ಒಂದು ನಿಮಿಷ ಅಥವಾ 30 ನಿಮಿಷದ ನಂತರ ಲಾಕ್ ಆಗಬೇಕೇ ಎಂದು ಕೇಳುತ್ತದೆ. ಇಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಆರಿಸಿಕೊಂಡರೆ ಫಿಂಗರ್ ಪ್ರಿಂಟ್ ಲಾಕ್ ಆನ್ ಆಗುತ್ತದೆ. ಪ್ರತ್ಯೇಕವಾಗಿ ಮತ್ತೆ ನೀವು ಕೈ ಬೆರಳನ್ನು ಒತ್ತಬೇಕಾಗಿಲ್ಲ. ಈಗಾಗಲೇ ನೀವು ಯಾವೆಲ್ಲ ಕೈ ಬೆರಳಿನ ಅಚ್ಚನ್ನು ಫೋನಿಗೆ ನೀಡಿದ್ದಿರೋ ಆ ಎಲ್ಲ ಕೈ ಬೆರಳನ್ನು ಬಳಸಿಕೊಂಡು ವಾಟ್ಸಪ್ ಲಾಕ್ ಓಪನ್ ಮಾಡಬಹುದು.

ಎಲ್ಲಾ ಬಳಕೆ ದಾರರಿಗೂ ಈ ಸೌಲಭ್ಯ ದೊರೆಯುವುದಿಲ್ಲ :
ಹೆಚ್ಚಿನ ಜನ ಬಳಸುತ್ತಿರುವ ವಾಟ್ಸಪ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರೆ ನಿಮಗೆ ಈ ಫೀಚರ್ ಸಿಗುವುದಿಲ್ಲ. ನೀವು ವಾಟ್ಸಪ್ ಬೀಟಾ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರೆ ಮಾತ್ರ ಈ ಫೀಚರ್ ಸಿಗುತ್ತದೆ.

ವಾಟ್ಸಪ್ ಯಾವುದೇ ಹೊಸ ವಿಶೇಷತೆಗಳನ್ನು ಮೊದಲು ಬೀಟಾ ಆವೃತ್ತಿಗೆ ಪರಿಚಯಿಸುತ್ತದೆ. ಬಳಿಕ ಎಲ್ಲ ಬಳಕೆದಾರರಿಗೆ ಆ ಸೇವೆಯನ್ನು ವಿಸ್ತರಿಸುತ್ತದೆ. ಈ ಆವೃತ್ತಿಯ ವಾಟ್ಸಪ್ ಬೇಕಿದ್ದಲ್ಲಿ ಈಗ ಬಳಕೆ ಮಾಡುತ್ತಿರುವ ವಾಟ್ಸಪ್ ಅನ್ನು ಅನ್ ಇನ್ ಸ್ಟಾಲ್ ಮಾಡಿ ಪ್ಲೇ ಸ್ಟೋರ್ ಗೆ ಹೋಗಿ ವಾಟ್ಸಪ್ ಬೀಟಾ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಬೇಕಾಗುತ್ತದೆ.

error: Content is protected !! Not allowed copy content from janadhvani.com