ಮಕ್ಕಾ: ಕೆಸಿಎಫ್ HVC 2019 ಇದರ ವತಿಯಿಂದ ಮಕ್ಕತುಲ್ ಮುಕರ್ರಮದ ಹಜ್ಜ್ ಬಿಲ್ಡಿಂಗ್ ನಂಬರ್ 736 ಅಜಿಯಾದ್ ಸದ್ದ್ ನಲ್ಲಿ ಮಂಗಳೂರಿನಿಂದ ಬಂದ ಹಜ್ಜಾಜಿಗಳಿಗೆ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಉಸ್ತಾದರ ನೇತೃತ್ವದಲ್ಲಿ ಹಜ್ಜ್ ತರಗತಿ ನಡೆಯಿತು.

ನಂತರ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಶಿಲ್ಪಿಯೂ ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆದ ಮರ್ಹೂಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಹೆಸರಲ್ಲಿ ತಹ್ಲೀಲ್ ಮಜ್ಲಿಸ್ ಹಾಗೂ ಜನಾಝ ನಮಾಝ್ ನಡೆಯಿತು.

ಸಯ್ಯಿದ್ ಶರಫುದ್ದೀನ್ ತಂಙಳ್ ಕೊಡಗು ದುಆ ನಡೆಸಿದರು. ಮಕ್ಕತುಲ್ ಮುಕರ್ರಮಃ HVC ಕ್ಯಾಪ್ಟನ್ ಮೂಸ ಹಾಜಿ ಕಿನ್ಯ ಸ್ವಾಗತಿಸಿ, ಮಲ್ಜಹ್ ಆರ್ಗನೈಸರ್ ಖಾಲಿದ್ ಕಬಕ ದನ್ಯವಾದ ಸಲ್ಲಿಸಿದರು. ಈ ಸಂದರ್ಭ ಇಂಡಿಯನ್ ಹಜ್ ಕಮಿಟಿ ವೆಲ್ಫೇರ್ ಸರ್ವಿಸ್ ನೇತಾರರಾದ ಖಾಸಿಮ್ ಹಾಜಿಯವರು HVC ಸ್ವಯಂಸೇವಕರ ಸೇವೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಅನುಭವವನ್ನು ವಿವರಿಸಿದರು. ಹೆಚ್ ವಿ ಸಿ ಮಕ್ಕಾ ವೈಸ್ ಕ್ಯಾಪ್ಟನ್ ಹಾರಿಸ್ ಕಿನ್ಯಾ ಮೊದಲಾದವರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ