ಶಾರ್ಜಾ: ರಸ್ತೆ ಬದಿಗಳಲ್ಲಿ ಮೊಬೈಲ್ ರೀಚಾರ್ಜ್ ಮಾಡುವವರ ವಿರುದ್ಧ ಕಠಿಣ ಕ್ರಮ

ಶಾರ್ಜಾ: ರಸ್ತೆ ಬದಿಯಲ್ಲಿ ಮೊಬೈಲ್ ರಿಚಾರ್ಜ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಶಾರ್ಜಾ ಪೊಲೀಸರು ಮುಂದಾಗಿದ್ದಾರೆ. ಮೊಬೈಲ್ ಫೋನ್ ಮೂಲಕ ನಡೆಸಲಾಗುವ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಪರಿಶ್ರಮಗಳನ್ನು ಪೊಲೀಸರು ನಡೆಸುತ್ತಿದ್ದು, ಇದರ ಭಾಗವಾಗಿ ನಡೆಸಿದ ತಪಾಸಣೆಯಲ್ಲಿ ಇತ್ತೀಚೆಗೆ ಹಲವಾರು ಮಂದಿಯನ್ನು ಬಂಧಿಸಲಾಗಿದೆ. ಅದೇ ರೀತಿ ರಸ್ತೆ ಬದಿ ರಿಚಾರ್ಜ್ ಮಾಡುವವರ ಗುಂಪನ್ನೂ ಬಂಧಿಸಲಾಗಿದೆ.

ಮೂರು ತಿಂಗಳಲ್ಲಿ ಏಷ್ಯನ್ ಮೂಲದ 37 ಮಂದಿಯನ್ನು ಸೆರೆ ಹಿಡಿಯಲಾಗಿದೆ. ಇವರು ಐದು ಮತ್ತು ಹತ್ತು ದಿರ್ಹಂಗಳ ರಿಚಾರ್ಜ್ ಮಾಡುವರಾಗಿದ್ದು, ಅಧಿಕೃತವಾಗಿ ಟೆಲಿಕಾಂ ತನ್ನ ಗ್ರಾಹಕರಿಗೆ 25, 30 ದಿರ್ಹಂಗಳ ರಿಚಾರ್ಜ್ ಕೂಪನ್ ಮಾರಾಟ ಮಾಡುತ್ತಿದೆ ಎನ್ನಲಾಗಿದೆ. ಆ ಕಾರಣಕ್ಕಾಗಿ ಸಣ್ಣ ಮೊತ್ತದ ರಿಚಾರ್ಜ್ಗೆ ಭಾರೀ ಬೇಡಿಕೆ ಇರುವುದು ರಸ್ತೆ ಬದಿ ರಿಚಾರ್ಜ್ ಮಾಡುವವರಿಗೆ ವರದಾನವಾಗಿದ್ದು, ಅಲ್ಲಿ ಕಾರ್ಯಾಚರಿಸುವವರ ಸಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ. ಬಂಧಿಸಲಾದವರ ಪೈಕಿ ಹೆಚ್ಚಿನವರು ಅನಧಿಕೃತವಾಗಿ ನೆಲೆಸಿದವರಾಗಿದ್ದಾರೆ ಎಂದು ಶಾರ್ಜಾ ಪೊಲೀಸ್‌ ಕ್ರಿಮಿನಲ್ ಇನ್ವೆಸ್ಟಿಗೇಷನ್ ವಿಭಾಗದ ಡೈರೆಕ್ಟರ್ ಕರ್ನಲ್ ಇಬ್ರಾಹೀಂ ಅಲ್ ಅಜೀರ್ ತಿಳಿಸಿದ್ದಾರೆ.

ರಿಚಾರ್ಜ್ ಮಾಡುವವರು ರಸ್ತೆ ಸಂಚಾರಿಗಳು ಮತ್ತು ಎಡರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ರಿಚಾರ್ಜ್ ಮಾಡಲು ಒತ್ತಾಯ ಮಾಡುತ್ತಿದ್ದರು ಎಂದು ಹಲವರು ವ್ಯಕ್ತಪಡಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ತಡವಾಗಿಯೂ ಇಂತವರನ್ನು ಕಾಣುವುದು ಸಾಧ್ಯವಿದೆ. ಮೂಲ ನಿವಾಸಿ ಮಹಿಳೆಯ ಪೋನ್‌ನಿಂದ 3800 ದಿರ್ಹಂ ಮೊತ್ತವನ್ನು ಮತ್ತೊಂದು ಫೋನ್‌ಗೆ ಹಸ್ತಾಂತರ ಮಾಡಿದ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು.

ಲಕ್ಷಗಳು ಬಹುಮಾನವಾಗಿ ದೊರೆತಿದ್ದು, ಅದನ್ನು ಮುಂದುವರಿಸುವ ಭಾಗವಾಗಿ ಪಾವತಿಸಬೇಕಾದ ಮೊತ್ತವಾಗಿ 3800 ದಿರ್ಹಂ ಅವಶ್ಯಕತೆ ಇರುವುದಾಗಿ ತಿಳಿಸಿ, ಹಣವನ್ನು ಪಡೆಯಲಾಗಿತ್ತು. ಈ ರೀತಿ ಪಡೆಯಲಾದ ಹಣದಿಂದ ಐದು ಹತ್ತು ದಿರ್ಹಂಗಳನ್ನು ಇತರರಿಗೆ ರಿಚಾರ್ಜ್ ಮಾಡಲಾಗುತ್ತಿತ್ತು ಎಂದು ಶಾರ್ಜಾ ನ್ಯಾಯಾಲಯ ತಿಳಿಸಿದೆ. ಈ ರೀತಿ 5000 ದಿರ್ಹಂ ನಿಂದ ಹಿಡಿದು 30,000 ದಿರ್ಹಂ ವರೆಗೆ ನಷ್ಟಹೊಂದಿದವರೂ ಇದ್ದಾರೆ ಎನ್ನಲಾಗಿದೆ.

ಗ್ರಾಹಕರ ಗಮನಕ್ಕೆ: ರಸ್ತೆ ಬದಿಗಳಲ್ಲಿ ಮೊಬೈಲ್ ರೀಚಾರ್ಜ್ ಮಾಡುವವರು ಗ್ರಾಹಕರ ಮೊಬೈಲ್ ಸಂಖ್ಯೆ ನಮೂದಿಸಲು ಅವರ ಕೈಯಲ್ಲಿರುವ ಮೊಬೈಲನ್ನು ನೀಡುತ್ತಾರೆ. ಅದೇ ಹೊತ್ತಿನಲ್ಲಿ ಪೋಲೀಸ್ ಬಂದಲ್ಲಿ ತಾವು ಬಂಧನಕ್ಕೊಳಗಾಗುವಿರಿ ಜಾಗ್ರತೆ!

Leave a Reply

Your email address will not be published. Required fields are marked *

error: Content is protected !!