janadhvani

Kannada Online News Paper

50 ಸಾವಿರಕ್ಕಿಂತ ಅಧಿಕ ಮೊತ್ತದ ವ್ಯವಹಾರಕ್ಕೆ ಪಾನ್ ಕಾರ್ಡ್ ಬದಲು ‘ಆಧಾರ್’ ಸಾಕು

ನವದೆಹಲಿ: ‘ಆಧಾರ್‌ ಬಳಸಿಯೂ 50 ಸಾವಿರಕ್ಕಿಂತ ಅಧಿಕ ಮೊತ್ತದ ನಗದು ಪಡೆಯಬಹುದು ಅಥವಾ ಠೇವಣಿ ಇಡಬಹುದು’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

‘ಇನ್ನುಮುಂದೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ನಗದು ವರ್ಗಾವಣೆಗೆ ಪಾನ್ ಬದಲಾಗಿ ಆಧಾರ್‌ ಅನ್ನು ಒಪ್ಪಿಕೊಳ್ಳುವಂತೆ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳಲಿವೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ವಿವರ (ರಿಟರ್ನ್‌) ಸಲ್ಲಿಸಲು ಆಧಾರ್‌ ಬದಲಿಗೆ ಪಾನ್ ಅಥವಾ ಪಾನ್ ಬದಲಿಗೆ ಆಧಾರ್‌ ಬಳಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

‘ಕೆಲವರು ಪಾನ್ ಬಳಸಿದರೆ, ಕೆಲವರು ಆಧಾರ್‌ ಬಳಸುತ್ತಾರೆ. ಹೀಗಾಗಿ ಬ್ಯಾಂಕ್‌ಗಳು ಎರಡನ್ನೂ ಒಪ್ಪಿಕೊಳ್ಳಲು ಸಿದ್ಧವಿರಬೇಕು. ದೇಶದಲ್ಲಿ 41 ಕೋಟಿಗೂ ಅಧಿಕ ಪಾನ್ ಇದ್ದು ಅದರಲ್ಲಿ 22 ಕೋಟಿಯಷ್ಟನ್ನು ಆಧಾರ್‌ ಜತೆ ಜೋಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com