ಸಾರ್ವಜನಿಕ ವಲಯದಲ್ಲಿನ 1 ಲಕ್ಷಕ್ಕೂ ಮಿಕ್ಕ ವೀದೇಶೀಯರ ಇಖಾಮ ರದ್ದು

ಕುವೈತ್ ಸಿಟಿ: ಕುವೈತಿನ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದ 1,02,000 ವೀದೇಶೀಯರ ನಿವಾಸ ದಾಖಲೆಗಳನ್ನು ರದ್ದುಗೊಳಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇಷ್ಟೊಂದು ವಿದೇಶೀಯರನ್ನು ಸರ್ವೀಸ್ ನಿಂದ ವಜಾ ಮಾಡಿ, ಸ್ವದೇಶೀಯರನ್ನು ನೇಮಿಸಲಾಗಿದೆ.

ಸ್ವದೇಶೀಕರಣದ ಭಾಗವಾಗಿ ಸಾರ್ವಜನಿಕ ವಲಯದಲ್ಲಿನ ವಿದೇಶೀಯರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಿದೆ.

ಪ್ರಸಕ್ತ ಅಲ್ಲಿರುವ ವಿದೇಶೀಯರ ಪೈಕಿ 53 ಶೇ. ಅರಬ್ ವಂಶಜರೇ ತುಂಬಿದ್ದಾರೆ. ಕುವೈತ್ ಗೃಹ ಖಾತೆಯು ಹೊರಡಿಸಿದ ಸುತ್ತೋಲೆ ಪ್ರಕಾರ 63 ಶೇ. ಏಷ್ಯನ್ನರು ಮತ್ತು 32. ಶೇ. ಅರಬ್ ವಂಶಜರನ್ನು ಕೆಲಸದಿಂದ ವಜಾ ಮಾಡಲಾಗಿದೆ. ವಿದೇಶೀಯರ ಪೈಕಿ ಮೊದಲ ಸ್ಥಾನದಲ್ಲಿರುವ ಭಾರತೀಯರ ಸಂಖ್ಯೆಯಲ್ಲೂ ಭಾರಿ ಇಳಿಕೆ ಕಂಡುಬಂದಿದೆ.

Leave a Reply

Your email address will not be published. Required fields are marked *

error: Content is protected !!