janadhvani

Kannada Online News Paper

ಬೆಂಗಳೂರು: ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದಾಗಿ ಗಮನಕ್ಕೆ ಬಂದಿದೆ ಆದರೆ,ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಮ್ಮಿಶ್ರ ಸರಕಾರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹಲವು ಶಾಸಕರು ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ, ಬಹಳ ಜನ ಶಾಸಕರು ರಾಜೀನಾಮೆ ಕೊಟ್ಟಿರುವುದು ಗೊತ್ತಾಗಿದೆ. ಇದರಲ್ಲಿ ನಮ್ಮ ಪಾತ್ರ ಇಲ್ಲ. ಮುಂದೇನು ಬೆಳವಣಿಗೆ ಆಗುತ್ತೆ ಅಂತ ಕಾದು ನೋಡೋಣ. ಇವತ್ತು ಯಾರು ರಾಜೀನಾಮೆ‌ ಕೊಟ್ಟಿದ್ದಾರೋ, ಮುಂದೆ‌ ಅವರೇನು ನಿಲುವು ತೆಗೆದುಕೊಳ್ಳುತ್ತಾರೋ ಅದರ ಆಧಾರದ ಮೇಲೆ ರಾಜಕೀಯ ಭವಿಷ್ಯ ನಿಂತಿದೆ. ಅದಕ್ಕೆ ನಾನು‌ ಇಷ್ಟು ಬೇಗ ಪ್ರತಿಕ್ರಿಯೆ ಕೊಡೋದಿಲ್ಲ ಎಂದಿದ್ದಾರೆ.
ಜನರು ಕೂಡ ರಾಜ್ಯ ಸಕಾರದ ಮೇಲೆ‌ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅನಿರೀಕ್ಷಿತವಾಗಿ ಶಾಸಕರು ರಾಜಿನಾಮೆ ಕೊಡ್ತಿದ್ದಾರೆ. ಇದೆಲ್ಲವನ್ನು ನಾನೂ ಕೂಡ ಗಮನಿಸ್ತಾ ಇದ್ದೇನೆ. ಮುಂದೇನು ಅವರು ನಿಲುವು ತೆಗೆದುಕೊಳ್ಳುತ್ತಾರೊ ಕಾದು ನೋಡೊಣ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

error: Content is protected !! Not allowed copy content from janadhvani.com