janadhvani

Kannada Online News Paper

ಪುತ್ತೂರು: ವಿದ್ಯಾರ್ಥಿನಿಯ ಗ್ಯಾಂಗ್ ರೇಪ್- SSF ಜಿಲ್ಲಾ ಕ್ಯಾಂಪಸ್ ತೀವ್ರ ಖಂಡನೆ

ಪುತ್ತೂರು:ಕಾಲೇಜು ಸಮವಸ್ತ್ರ ಧರಿಸಿರುವ ವಿದ್ಯಾರ್ಥಿನಿಗೆ ಗಾಂಜಾ ನೀಡಿ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಾರೊಂದರಲ್ಲಿ ಈ ಘಟನೆ ನಡೆದಿದ್ದು,ಇದರ ದೃಶ್ಯಾವಳಿಯ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಇದೊಂದು ಗ್ಯಾಂಗ್ ರೇಪ್ ಪ್ರಕರಣವಾಗಿದ್ದು,ವಿದ್ಯಾರ್ಥಿಗೆ ಮಾದಕ ದ್ರವ್ಯ ವಸ್ತು ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ.

ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕಿದ್ದು, ಆರೋಪಿಗಳಿಗೆ ಕಾನೂನಿನಡಿಯಲ್ಲಿ ಶೀಘ್ರವಾಗಿ ಶಿಕ್ಷೆ ಜಾರಿಯಾಗಬೇಕಿದೆ.
ಕ್ಯಾಂಪಸ್ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಈ ಹಿಂದೆ ರಾಜ್ಯದಾದ್ಯಂತ ಮಾದಕ ದ್ರವ್ಯ ಜಾಗೃತಾ ಅಭಿಯಾನ ಹಾಗೂ ಸಮಾವೇಶಗಳು ನಡೆದಿದ್ದು ಇತರ ಸಂಘ ಸಂಸ್ಥೆಗಳು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿಶೇಷ ಅಭಿಯಾನ ನಡೆಸಬೇಕಿದೆ.

ಪುತ್ತೂರು ಅತ್ಯಾಚಾರ ಅಪರಾಧಿಗಳಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕಾಲೇಜು ಕ್ಯಾಂಪಸ್ ಗಳು ಇಂಥಹಾ ಸಾಮೂಹಿಕ ಅತ್ಯಾಚಾರಗಳ ಕೇಂದ್ರವಾಗಿ ಮಾರ್ಪಾಡಾಗುವುದರಲ್ಲಿ ಸಂಶಯವಿಲ್ಲ. ಇಂಥಹ ಪ್ರಕರಣಗಳನ್ನು ಮಾದ್ಯಮಗಳು ಧರ್ಮ, ಜಾತಿ, ಸಂಘಟನೆ ರಾಜಕೀಯ ನೋಡದೆ ನಿಜಸ್ಥಿತಿಯನ್ನು ಬಹಿರಂಗಗೊಳಿಸಬೇಕು ಎಂದು SSF ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಲೀ ತುರ್ಕಳಿಕ್ಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com