ಜಿದ್ದಾ,ಜು.2: ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ಸದಸ್ಯ, ಸಕ್ರಿಯ ಕಾರ್ಯಕರ್ತ ಹನೀಫ್ ಶುಂಠಿಕೊಪ್ಪ ಅವರು ಇಂದು (02/07/2019) ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಹೃದಯಾಘಾತದಿಂದ ಮರಣ ಹೊಂದಿದ್ದಾರೆ.
ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಲ್ಲಿ ಚಾಲಕ ವೃತ್ತಿಯಲ್ಲಿದ್ದ ಅವರು ರಜಾ ನಿಮಿತ್ತ ಊರಿಗೆ ತೆರಳಿದ್ದರು.
ಸುನ್ನಿ ಸಂಘ ಸಂಸ್ಥೆಗಳ ಸದಸ್ಯರೂ ಸಹಕಾರಿಯೂ ಆಗಿದ್ದ ಇವರು ಎರಡು ಗಂಡು ಒಂದು ಹೆಣ್ಣು ಮತ್ತು ಪತ್ನಿ ಹಾಗೂ ಅಪಾರ ಬಂಧು ಮಿತ್ರರನ್ನೂ ಕೆಸಿಎಫ್ ಸುನ್ನೀ ಕಾರ್ಯಕರ್ತರನ್ನು ಅಗಲಿದ್ದಾರೆ.ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನು ಕುಟುಂಬಸ್ಥರಿಗೆ ನೀಡಲಿ.
ಮೃತರ ಹೆಸರಿನಲ್ಲಿ ಎಲ್ಲಾ ಸುನ್ನೀ ಕಾರ್ಯಕರ್ತರು ಅವರ ಪರಲೋಕ ಜೀವನ ಮೋಕ್ಷಕ್ಕಾಗಿ ಪ್ರತ್ಯೇಕ ದುಅಃ ಮಾಡಿ,ಖುರ್’ಆನ್, ತಹ್ಲೀಲ್ ಹೇಳಿ ಹದಿಯಾ ಮಾಡಬೇಕಾಗಿ ವಿನಂತಿಸುತ್ತಾ ಹನೀಫ್ ಅವರ ಅಗಲಿಕೆಯಲ್ಲಿ ತೀವ್ರ ಸಂತಾಪವನ್ನು ಸೂಚಿಸುತ್ತಿದ್ದೇವೆ.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್, ಜಿದ್ದಾ ಝೋನ್
ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್: ಕೊಪ್ಪಳ ಜಿಲ್ಲೆಗೆ ನೂತನ ಸಾರಥ್ಯ
ಜನವರಿ 27ಕ್ಕೆ SYS ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ COUNT-20 ಕ್ಯಾಂಪ್
ಕೆ.ಸಿ.ಎಫ್ ಮಕ್ಕಾ ಸೆಕ್ಟರ್: ಐದು ಯೂನಿಟ್ ಗಳ ವಾರ್ಷಿಕ ಕೌನ್ಸಿಲ್
ಅಲ್-ಮದೀನತುಲ್ ಮುನವ್ವರ ಮೂಡಡ್ಕ: ದಮ್ಮಾಮ್ ಮಹಾಸಭೆ
ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಷನ್: ವಾರ್ಷಿಕ ಮಹಾಸಭೆ- ನೂತನ ಸಮಿತಿ ಅಸ್ತಿತ್ವಕ್ಕೆ
ಅಲ್-ಮದೀನತುಲ್ ಮುನವ್ವರ ಮೂಡಡ್ಕ: ಅಲ್ ಬಾದಿಯಾ ಮಹಾಸಭೆ