janadhvani

Kannada Online News Paper

ಕೆಸಿಎಫ್ ಶಾರ್ಜಾ ಝೋನ್: ಅಧ್ಯಕ್ಷರಾಗಿ ಅಬೂಸ್ವಾಲಿಹ್ ಸಖಾಫಿ ಪುನರಾಯ್ಕೆ

ಶಾರ್ಜಾ :ಕರ್ನಾಟಕ ಕಲ್ಚರಲ್ ಫೌಂಡೇಶನ್ ಶಾರ್ಜಾ ಝೋನಿನ ವಾರ್ಷಿಕ ಮಹಾಸಭೆಯು ದಿನಾಂಕ 28-06-19 ರಂದು ಶುಕ್ರವಾರ ರಾತ್ರಿ 8.30 ಗಂಟೆಗೆ ಅಲ್ ವಹದಾದಲ್ಲಿರುವ ಅಲ್ ಮಹರಾ ರೆಸ್ಟೋರೆಂಟ್ ನಲ್ಲಿ ಶಾರ್ಜ ಝೋನ್ ಅಧ್ಯಕ್ಷರಾದ ಬಹು ಅಬೂಸ್ವಾಲಿಹ್ ಸಖಾಫಿ ಇನೋಳಿ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅಬ್ದುಲ್ ಅಝೀಝ್ ಸಖಾಫಿ ಕೊಂಡಂಗೇರಿ ಉದ್ಘಾಟಿಸಿ,ಪ್ರಧಾನ ಕಾರ್ಯದರ್ಶಿ ರಜಬ್ ಮಹಮ್ಮದ್ ಕಳೆದ ಸಾಲಿನ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.ಆಯಾ ವಿಭಾಗದ ಕಾರ್ಯದರ್ಶಿಯರು ತಮ್ಮ ತಮ್ಮ ಇಲಾಖೆಯ ವರದಿಯನ್ನುವಾಚಿಸಿದರು. ನಂತರ ಸಭೆಯ ಸರ್ವಾನುಮತದಿಂದ ವರದಿ ಹಾಗೂ ಲೆಕ್ಕಪತ್ರವನ್ನು ಅಂಗೀಕರಿಸಲಾಯಿತು.

ಕೆ.ಸಿ.ಎಫ್ ರಾಷ್ಟ್ರೀಯ ವೆಲ್ಫೇರ್ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಬ್ರ್ಯೆಟ್ ಮುನ್ನುಡಿ ಭಾಷಣ ಮಾಡಿದರು. ಚುನಾವಣಾಧಿಕಾರಿಯಾಗಿ ಅಗಮಿಸಿದ ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು.ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳರವರು ಪ್ರಸ್ತುತ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಗೆ ಚಾಲನೆ ನೀಡಿದರು.

ನೂತನ ಪಧಾದಿಕಾರಿಗಳು:

ಅಧ್ಯಕ್ಷರು: ಅಬೂಸ್ವಾಲಿಹ್ ಸಖಾಫಿ ಇನೋಳಿ
ಪ್ರ ಕಾರ್ಯದರ್ಶಿ: ರಜಬ್ ಮುಹಮ್ಮದ್ ಉಚ್ಚಿಲ
ಕೋಶಾಧಿಕಾರಿ: ಅಬ್ದುಲ್ಲಾ ಹಾಜಿ ನಲ್ಕ

ಸಂಘಟನಾ ಇಲಾಖೆ:
ಅಧ್ಯಕ್ಷರು : ಮುಹಮ್ಮದ್ ಹುಸೈನ್ ಇನೋಳಿ
ಕಾರ್ಯದರ್ಶಿ : ಬಿ.ಟಿ. ಅಶ್ರಫ್ ಲತೀಫಿ

ಶಿಕ್ಷಣ ಇಲಾಖೆ:
ಅಧ್ಯಕ್ಷರು : ಅಝೀಝ್ ಸಖಾಫಿ ಕೊಂಡಂಗೇರಿ
ಕಾರ್ಯದರ್ಶಿ : ಅಶ್ರಫ್ ಮುಸ್ಲಿಯಾರ್ ಅಳಿಕೆ

ಅಡಳಿತ ಇಲಾಖೆ:
ಅಧ್ಯಕ್ಷರು : ಅಬ್ದುಲ್ಲಾ ಕುಂಞ್ಞ ಪೆರುವಾಯಿ
ಕಾರ್ಯದರ್ಶಿ : ತಾಜುದ್ದೀನ್‌ ಅಮ್ಮಂಜೆ

ಸಾಂತ್ವನ ಇಲಾಖೆ :
ಅಧ್ಯಕ್ಷರು : ಕಮಾಲುದ್ದೀನ್‌ ಮದಕ
ಕಾರ್ಯದರ್ಶಿ : ರಫೀಕ್ ತೆಕ್ಕಾರು

ಪ್ರಕಾಶನ ಇಲಾಖೆ :
ಅಧ್ಯಕ್ಷರು : ಇಸ್ಮಾಯಿಲ್ ಸಖಾಫಿ ಮಾಚಾರ್
ಕಾರ್ಯದರ್ಶಿ : ಹನೀಫ್ ಬಸರ

ಇಹ್ಸಾನ್ ಇಲಾಖೆ :
ಅಧ್ಯಕ್ಷರು : ಅಬ್ದುಲ್ ರಜಾಕ್ ಹಾಜಿ ಜಲ್ಲಿ
ಕಾರ್ಯದರ್ಶಿ : ಅಬ್ದುಲ್ ರಜಾಕ್ ಮುಸ್ಲಿಯಾರ್

ನೂತನ‌ ಸಮಿತಿಗೆ ರಾಷ್ಟ್ರೀಯ ನಾಯಕರಾದ ಉಸ್ಮಾನ್ ಹಾಜಿ ನಾಪೋಕ್ಲು, ಜೈನುದ್ದೀನ್ ಹಾಜಿ ಬೆಳ್ಲಾರೆ, ಕರೀಂ ಮುಸ್ಲಿಯಾರ್ , ಮೂಸಾ ಹಾಜಿ ಬಸರ, ಅಬ್ದುಲ್ಲಾ ಹಾಜಿ ನಲ್ಕ ಮತ್ತು ಶರೀಫ್ ಸಾಲೆತ್ತೂರು‌ ಶುಭ ಹಾರೈಸಿದರು.

ಕಾರ್ಯಕ್ರಮದ ಮೊದಲಿಗೆ ಇಬ್ರಾಹಿಂ ಸಖಾಫಿ ಕೆದುಂಬಾಡಿಯವರು ಕಾರ್ಯಕ್ರಮವನ್ನು ಸ್ವಾಗತಿಸಿ,ಕೊನೆಯಲ್ಲಿ ಪ್ರ.ಕಾರ್ಯದರ್ಶಿಯಾಗಿ ಮರು ಆಯ್ಕೆಗೊಂಡ ರಜಬ್ ಮಹಮ್ಮದ್ ರವರು ದನ್ಯವಾದವಿತ್ತರು.

ನೆಬಿ ಕೀರ್ತನೆ,ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

error: Content is protected !! Not allowed copy content from janadhvani.com