janadhvani

Kannada Online News Paper

ಕೆ.ಸಿ.ಎಫ್ ಅಲ್ ವಹಾದಾ ಸೆಕ್ಟರ್: ನೂತನ ಅಧ್ಯಕ್ಷರಾಗಿ ಮನ್ಸೂರ್ ಮಹಮ್ಮದ್ ಅಯ್ಕೆ

ಶಾರ್ಜಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಶಾರ್ಜ‌ ಝೋನ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಲ್‌ ವಹಾದಾ ಸೆಕ್ಟರಿನ ವಾರ್ಷಿಕ ಮಹಾ ಸಭೆಯ ದಿನಾಂಕ 13-6-19 ರಂದು ಅಲ್ ಖಾನಿನ ಅಲ್ ಯಾಸತ್ ಟವರಿನಲ್ಲಿ ಬಹು ಇಸ್ಮಾಯಿಲ್ ಸಖಾಫಿ ಮಾಚರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಶಾರ್ಜ ವಲಯದ ಅಧ್ಯಕ್ಷರಾದ ಬಹು ಅಬೂಸ್ವಾಲಿಹ್ ಸಖಾಫಿಯವರ ದುಆದೋಂದಿಗೆ ಆರಂಭವಾದ ಕಾರ್ಯಕ್ರಮವನ್ನು, ಸೆಕ್ಟರ್ ಕಾರ್ಯದರ್ಶಿ ಅರೀಸ್ ಕೆ.ಸಿ.ರೋಡ್ ಸಭೆಯನ್ನು ಸ್ವಾಗತಿಸಿದರು. ಕೆ.ಸಿ.ಎಫ್ ರಾಷ್ಟ್ರೀಯ ನಾಯಕರಾದ ಬಹು.ಕರೀಂ ಮುಸ್ಲಿಯಾರ್ ಸಭೆಯನ್ನು ಉದ್ಘಾಟಿಸಿದರು. ನಂತರ ಕಾರ್ಯದರ್ಶಿ ಅರೀಸ್ ಕೆ.ಸಿ.ರೋಡ್ ರವರು ಗತ ಕಾಲದ ವರದಿ ಹಾಗೂ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿ, ಸಭೆಯ ಸರ್ವ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಶಾರ್ಜ ವಲಯದ ಸಂಘಟನೆ ವಿಭಾಗದ ಅಧ್ಯಕ್ಷರಾದ ಬಹು. ಇಬ್ರಾಹಿಂ ಸಖಾಫಿ ಕೆದುಂಬಾಡಿಯವರು ಮುಖ್ಯ ಭಾಷಣ ಮಾಡಿ, ಸಂಘಟನೆಯ ಅವಶ್ಯಕತೆ ಹಾಗೂ ನಾವು ಹೇಗೆ ಸಂಘಟನೆಯಲ್ಲಿ ಕಾರ್ಯಚರಿಸಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ‌ಮನದಟ್ಟು ಮಾಡಿದರು.

ಚುನಾವಣಾ ಅಧಿಕಾರಿಯಾಗಿ ಅಗಮಿಸಿದ ಶಾರ್ಜ ವಲಯದ ಪ್ರಾಧನ ಕಾರ್ಯದರ್ಶಿಯಾದ ರಜಬ್ ಮಹಮ್ಮದ್ ರವರು ಸದರಿ ಸಮಿತಿಯನ್ನು ಬರ್ಖಾಸ್ ಗೊಳಿಸಿ, ನೂತನ ಸಮಿತಿಗೆ ಚಾಲನೆ ನೀಡಿದರು.

ನೂತನ ಸಮಿತಿಯ ವಿವರ:

ಅಧ್ಯಕ್ಷರು : ಮನ್ಸೂರ್ ಮುಹಮ್ಮದ್
ಕಾರ್ಯದರ್ಶಿ: ಸಿದ್ದೀಕ್ ಸರಳಿಕಟ್ಟೆ

ಕೋಶಾಧಿಕಾರಿ: ಶರಫುದ್ದೀನ್

ಶಿಕ್ಷಣ ಇಲಾಖೆ:
ಅಧ್ಯಕ್ಷರು : ಬಾವಾ ಮದನಿ ಅಜಿಲಮೊಗರು
ಕಾರ್ಯದರ್ಶಿ : ನಜೀರ್ ಕುಪ್ಪೆಟ್ಟಿ

ಸಾಂತ್ವನ ಇಲಾಖೆ :
ಅಧ್ಯಕ್ಷರು : ಇಸ್ಹಾಕ್ ಕೂರ್ನಡ್ಕ
ಕಾರ್ಯದರ್ಶಿ : ಮುಸ್ತಫ ಪಂಜ

ಪ್ರಕಾಶನ ಇಲಾಖೆ :
ಅಧ್ಯಕ್ಷರು : ಹಕೀಮ್ ತೆಕ್ಕಾರು
ಕಾರ್ಯದರ್ಶಿ : ಝುಬೈರ್ ಕುದ್ಲೂರು

ಇಹ್ಸಾನ್ ಇಲಾಖೆ :
ಅಧ್ಯಕ್ಷರು : ಆರಿಸ್ ಕೆ.ಸಿ ರೋಡ್
ಕಾರ್ಯದರ್ಶಿ : ರಝಕ್ ಕೋಲ್ಪೆ

ನಂತರ ನೂತನ ಸಮಿತಿಗೆ ಶಾರ್ಜ ವಲಯದ ಸಂಘಟನೆ ವಿಭಾಗದ ಕಾರ್ಯದರ್ಶಿಯಾದ ಬಿ.ಟಿ.ಅಶ್ರಫ್ ಲೇತಿಫ್, ಪ್ರಕಾಶನ ವಿಭಾಗದ ಅಧ್ಯಕ್ಷರಾದ ಹುಸ್ಸೇನ್ ಇನೋಲಿಯವರು ಶುಭ ಕೋರಿದರು. ಸಭೆಯಲ್ಲಿ ರಾಷ್ಟ್ರೀಯ ನಾಯಕರಾದ ಅಬ್ದುಲಾ ಹಾಜಿ‌ ನಲ್ಕ, ಶಿಕ್ಷಣ ವಿಭಾಗದ ಕಾರ್ಯದರ್ಶಿ ರಝಕ್ ಮುಸ್ಲಿಯಾರ್ ಹಾಜರಿದ್ದರು. ಕೊನೆಯಲ್ಲಿ 11 ನಾರಿಯತ್ ಸ್ವಲಾತ್ ಹೇಳಿ, ಸೆಕ್ಟರಿನ ನೂತನ ಕಾರ್ಯದರ್ಶಿ ಸಿದ್ಧೀಕ್ ಸರಳಿಕಟ್ಟೆಯವರು ದನ್ಯವಾದಿ ಕೋರಿ ಮೂರು ಸ್ವಲಾತ್ನೋಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಂಡಿತು.

error: Content is protected !! Not allowed copy content from janadhvani.com