ಅಜ್ಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯು.ಎ.ಇ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕೆ.ಸಿ.ಎಫ್ ಅಜ್ಮಾನ್ ಝೋನ್ ದ್ವಿವಾರ್ಷಿಕ ಮಹಾಸಭೆಯು ಝೋನ್ ಅಧ್ಯಕ್ಷರಾದ ಶಾಫಿ ಸಖಾಫಿ ಕೊಂಡಂಗೇರಿರವರ ಅಧ್ಯಕ್ಷತೆಯಲ್ಲಿ ಸುನ್ನಿ ಸೆಂಟರ್ ಕರಾಮ ಅಜ್ಮಾನ್ ನಲ್ಲಿ ನಡೆಯಿತು.
ಸಭೆಯನ್ನು ಉಧ್ಘಾಟಿಸಿದ ಅಲ್-ಇಹ್ಸಾನ್ ರಾಷ್ಟ್ರೀಯ ಸಮಿತಿ ಕನ್ವೀನರ್ ಖಾದರ್ ಸಅದಿ, ಅಜ್ಮಾನ್ ಝೋನ್ ಕಾರ್ಯವೈಖರಿಗಳನ್ನು ಪ್ರಶಂಶಿಸಿದರು. ಝೋನ್ ಕಾರ್ಯದರ್ಶಿ ಅಕ್ರಮ್ ಬಿ.ಸಿ ರೋಡ್ ಸಭೆಯನ್ನು ಸ್ವಾಗತಿಸಿ, ಕೆ.ಸಿ.ಎಫ್ ಕೇವಲ ಒಂದು ಸಮುದಾಯಕ್ಕೆ ಮಾತ್ರ ತನ್ನ ಸೇವೆಯನ್ನು ಸೀಮಿತಗೊಳಿಸದೆ ಎಲ್ಲ ವರ್ಗಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿ ಅಜ್ಮಾನ್ ಝೋನ್ ನ ಶ್ಲಾಘನೀಯ ಸೇವೆಗಳನ್ನು ಸಭೆಯ ಮುಂದೆ ತೆರೆದಿಟ್ಟರು.
ದ್ವಿವಾರ್ಷಿಕ ವರದಿಯನ್ನು ಮಂಡಿಸಿದ ಕಾರ್ಯದರ್ಶಿ ಸಭೆಯ ಅನುಮೋದನೆಯನ್ನು ಪಡೆದುಕೊಂಡರು. ಕೋಶಾಧಿಕಾರಿ ಆದಮ್ ಈಶ್ವರಮಂಗಿಲ ಲೆಕ್ಕಪತ್ರವನ್ನು ಮಂಡಿಸಿದರು. ಝೋನ್ ಮಾಹಾಸಭೆಯ ವೀಕ್ಷಕರಾಗಿ ಆಗಮಿಸಿದ್ದ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಬ್ದುಲ್ ಜಲೀಲ್ ನಿಝಾಮಿ ಮಾತನಾಡಿ ಸಾಂಘಿಕ ಚಟುವಟಿಕೆಗಳ ಅನಿವಾರ್ಯತೆಯನ್ನು ಸಭೆಗೆ ತಿಳಿಸಿದರು.
ಇಥಿಯೋಪಿಯಾದಲ್ಲಿ ಮರಣ ಹೊಂದಿದ ಒಬ್ಬ ಕನ್ನಡಿಗನ ಪಾರ್ಥಿವ ಶರೀರವನ್ನು ಕೆ.ಸಿ.ಎಫ್ ಸಂಘ ಕುಟುಂಬದ ನೆರವಿನಿಂದ ಊರಿಗೆ ತಲುಪಿಸದ್ದನ್ನು ಸ್ಮರಿಸಿದ ಅವರು, ಸಂಘಟನೆಯು ಇಂದು ಅರಬ್ ರಾಷ್ಟ್ರ ಮಾತ್ರವಲ್ಲದೆ ಯೂರೋಪ್ ಆಫ್ರಿಕನ್ ದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿಕೊಂಡಿದೆ ಎಂದು ಹೇಳಿದರು.ಕೆಲವರ ತಿರಸ್ಕಾರ ಮನೋಭಾವನೆಗಳನ್ನು ನೋಡಿ ಸಾಂಘಿಕ ಚಟುವಟಿಕೆಗಳಿಂದ ಸರಿದು ನಿಲ್ಲದೆ ತನ್ನ ಜವಾಬ್ದಾರಿಯನ್ನು ನೆರವೇರಿಸುವ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ನಂತರ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಝೋನ್ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದಿಕ್ ಅಮಾನಿ ಕುಡ್ತಮುಗೇರು ಮತ್ತು ಕಾರ್ಯದರ್ಶಿಯಾಗಿ ಆದಮ್ ಈಶ್ವರಮಂಗಿಲ, ಕೋಶಾಧಿಕಾರಿಯಾಗಿ ಅಕ್ರಮ್ ಬಿ.ಸಿ ರೋಡ್ ರವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಶಾಫಿ ಸಖಾಫಿ ಕೊಂಡಂಗೇರಿ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಕೊಡಿಪ್ಪಾಡಿ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಮುಜೀಬ್ ಸಅದಿ ಕಾರ್ಯದರ್ಶಿಯಾಗಿ ತಾಜುದ್ದೀನ್ ಉಳ್ಳಾಲ, ಸಾಂತ್ವಾನ ಇಲಾಖೆ ಅಧ್ಯಕ್ಷರಾಗಿ ಅಬೂಬಕ್ಕರ್ ಮದನಿ ಕೆಮ್ಮಾರ ಕಾರ್ಯದರ್ಶಿಯಾಗಿ ಹಕೀಮ್ ಕುಂಜಾಡಿ ಸವಣೂರ್, ಕಚೇರಿ ವಿಭಾಗದ ಅಧ್ಯಕ್ಷರಾಗಿ ನಾಸಿರ್ ಕುಂದಾಪುರ ಕಾರ್ಯದರ್ಶಿಯಾಗಿ ರಾಝಿಕ್ ಕೊಡಗು, ಪಬ್ಲಿಕೇಷನ್ ವಿಭಾಗದ ಅಧ್ಯಕ್ಷರಾಗಿ ನಿಝಾಮುದ್ದೀನ್ ಮದನಿ ಉರುವಾಲ್ ಪದವು ಕಾರ್ಯದರ್ಶಿಯಾಗಿ ಅಶ್ರಫ್ ಕುಕ್ಕಾಜೆ ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಸಿದ್ದೀಕ್ ಪಾಣೆಮಂಗಳೂರು ಕಾರ್ಯದರ್ಶಿಯಾಗಿ ಹೈದರ್ ಸಾರ್ಯರವರನ್ನು ಹಾಗೂ ಹನ್ನೊಂದು ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ ನೂತನ ಸಮಿತಿಯು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ಸೂಚನೆಗಳನ್ನು ನೀಡಿ ನೂತನ ಕಾರ್ಯದರ್ಶಿಯ ಧನ್ಯವಾದದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿ 2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಇಹ್ಸಾನ್ ಸೆಂಟರ್, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಜನವರಿ 17ಕ್ಕೆ
ಶಾಫೀ ಸಅದಿಯವರ ಮೇಲಿನ ಸುಳ್ಳಾರೋಪ: ರಾಜ್ಯ SYS ಖಂಡನೆ
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ಗೆ ನೂತನ ಸಾರಥ್ಯ
ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವಾರ್ಷಿಕ ಮಹಾಸಭೆ
ಎಸ್ಸೆಸ್ಸೆಫ್ ಮುಡಿಪು ಡಿವಿಷನಿಗೆ ನೂತನ ಸಾರಥ್ಯ