janadhvani

Kannada Online News Paper

ಬನ್ನೂರಿನಲ್ಲಿ ಇಂದು ಮರ್ಹೂಮ್ ಮುಹಮ್ಮದ್ ಸಿರಾಜ್ ಅನುಸ್ಮರಣಾ ಸಂಗಮ

ಪುತ್ತೂರು,ಜೂನ್.29: SSF ಬನ್ನೂರು ಶಾಖೆಯ ಸದಸ್ಯರಾಗಿದ್ದು ಇತ್ತೀಚೆಗೆ ಮರಣ ಹೊಂದಿರುವ ಮರ್ಹೂಮ್ ಮುಹಮ್ಮದ್ ಸಿರಾಜ್ ಅಲಿ ಅವರ ಅನುಸ್ಮರಣಾ ಕಾರ್ಯಕ್ರಮವು ಇಂದು ಮಗ್ರಿಬ್ ನಮಾಝಿನ ಬಳಿಕ ಬನ್ನೂರು ಸುನ್ನೀ ಸೆಂಟರಿನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು SჄS ಬನ್ನೂರು ಬ್ರಾಂಚ್ ಕೋಶಾಧಿಕಾರಿ ಸೈಫುಲ್ಲಾ ಸಅದಿ ಉಸ್ತಾದರು ಉದ್ಘಾಟಿಸಲಿದ್ದಾರೆ. ಸಯ್ಯದ್ ಉಮ್ಮರ್ ತಂಙಳ್ ಬನ್ನೂರು ದುಆಃ ಆಶಿರ್ವಚನ ಮಾಡಲಿದ್ದಾರೆ. ಟಿಪ್ಪು ನಗರ ಕೊಡಂಗಾಯಿ ದಾರುನ್ನಜಾತ್ ಎಜುಕೇಶನ್ ಸೆಂಟರ್ ಮುದರ್ರಿಸ್ ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿ ಉಸ್ತಾದರು ಅನುಸ್ಮರಣಾ ಭಾಷಣ ಮಾಡಲಿದ್ದಾರೆ.

ವೇದಿಕೆಯಲ್ಲಿ SSF ದ,ಕ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಮ್ ಸಖಾಫಿ. SSF ಪುತ್ತೂರು ಸೆಕ್ಟರ್ ಅಧ್ಯಕ್ಷರಾದ ಸಲಾಮ್ ಹನೀಫಿ ಕಬಕ. SSF ಬನ್ನೂರು ಶಾಖೆ ಅಧ್ಯಕ್ಷರಾದ ಮುಹಮ್ಮದ್ ಹನೀಫ್. SჄS ಬನ್ನೂರು ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ. GCC ಸುನ್ನಿ ಫ್ರೆಂಡ್ಸ್ ಬನ್ನೂರು ಸದಸ್ಯರಾದ ರಹೀಮ್ ಕುವೈಟ್. ಹಾಗೂ ಸಯ್ಯದ್ ಆಬಿದ್ ತಂಙಳ್ UAE. ಸಹಿತ ಹಲವಾರು ಉಲಮಾ ಉಮರಾ ನೇತಾರರು ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ಕೇಳಿಕೊಂಡಿದ್ದಾರೆ.
ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com