ಸೌದಿಯಲ್ಲಿ ಮತ್ತೆ ಜಾರಿಗೆ ತರಲಾಗುವ ದೇಶೀಕರಣ ಯೋಜನೆಗಳು

ರಿಯಾದ್: ಸೌದಿ ಅರೇಬಿಯಾದಲ್ಲಿ ಈ ವರ್ಷ ಮತ್ತು ಮುಂದಿನ ವರ್ಷ ಜಾರಿಗೆ ತರಲಾಗುವ ಸ್ವದೇಶೀಕರಣ ಯೋಜನೆಯ ಮಾಹಿತಿಯನ್ನು ಸೌದಿಯ ಯುವರಾಜ ಬಹಿರಂಗ ಪಡಿಸಿದ್ದಾರೆ. ವಿದ್ಯಾಭ್ಯಾಸ, ಆರೋಗ್ಯ, ಕೃಷಿ ವಲಯಗಳಲ್ಲಿ ಸ್ವದೇಶೀಕರಣಕ್ಕೆ ಒತ್ತು ನೀಡಲಾಗುವುದು. ಇದಕ್ಕಾಗಿ ಎರಡು ಬಿಲಿಯನ್ ರಿಯಾಲ್ ಖರ್ಚು ಮಾಡಲಾಗುತ್ತದೆ.

ಈ ಹಿಂದೆ ಪ್ರಸ್ತಾಪಿಸಲಾದ ಸ್ವದೇಶೀಕರಣವನ್ನು ಶಕ್ತವಾಗಿ ಜಾರಿಗೆ ತರುವುದು ಕೂಡಾ ಯೋಜನೆಯ ಭಾಗವಾಗಿದ್ದು, ಇದಕ್ಕಾಗಿ ಎರಡು ಬಿಲಿಯನ್ ರಿಯಾಲ್ ಕಾದಿರಿಸಲಾಗಿದೆ. ತೈಲೇತರ ವಲಯದ ಲಾಭವನ್ನು ಮುಂದಿರಿಸಿ ಈ ಯೋಜನೆ ಎನ್ನಲಾಗಿದೆ. ಹೆಚ್ಚಿನ ಕೆಲಸಗಳನ್ನು ಕೃಷಿ, ಆರೋಗ್ಯ, ಶಿಪ್ಪಿಂಗ್ ವಲಯಗಳಲ್ಲಿ ಸೃಷ್ಟಿಸಲಾಗುವುದು.

ಮುಂದಿನ ವರ್ಷ ವಿದ್ಯಾಭ್ಯಾಸ ವಲಯದಲ್ಲಿ ಒಂದು ಬಿಲಿಯನ್ ರಿಯಾಲ್ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಈ ವಲಯದಲ್ಲೂ ಹೆಚ್ವಿನ ಸ್ವದೇಶೀಕರಣಕ್ಕೆ ಅವಕಾಶ ನೀಡಲಾಗುವುದು. ಆರಮ್ಕೋದಲ್ಲಿನ ಶೇರು ಮಾರಾಟ ವನ್ನೂ ಸಂಪೂರ್ಣಗೊಳಿಸಲಾಗುವುದು ಎಂದು ಯುವರಾಜ ಒಂದು ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಲಯದ ಸೇವೆಯನ್ನು ಉತ್ತಮಗೊಳಿಸಲು ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲಾಗುವುದು. ಆರ್ಥಿಕ ವಲಯದಲ್ಲಿ ಬದಲಾವಣೆಗಳನ್ನು ತಂದು ಸೌದಿ ಅರೇಬಿಯಾವನ್ನು ಮುನ್ನೆಲೆಗೆ ತರಲಾಗುವುದು ಎಂದು ಯುವ ರಾಜ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!