ಮಕ್ಕಾ: ಈ ವರ್ಷದ ಸ್ವದೇಶಿಗಳ ಹಜ್ ಬುಕ್ಕಿಂಗ್ ದುಲ್ ಖಅದ್ ಒಂದಕ್ಕೆ ಪ್ರಾರಂಭಗೊಳ್ಳಲಿದೆ ಎಂದು ಹಜ್ ಖಾತೆಯ ಸಚಿವಾಲಯ ತಿಳಿಸಿದೆ. ಹಜ್ ನಿರ್ವಹಿಸಲು ಆಗ್ರಹಿಸುವ ಸ್ವದೇಶಿಗಳು ಮತ್ತು ವಿದೇಶೀಯರು ಹಜ್ ಸಚಿವಾಲಯದ ಅಧಿಕೃತ ವೆಬ್‌ಸೈಟ್ www.localhaj.haj.gov.sa ಎಂಬ ಪೋರ್ಟಲ್ ಮೂಲಕ ನೋಂದಣಿ ಮಾಡಬೇಕು.
ಈ ವರ್ಷ ಸ್ಥಳೀಯರ ಹಜ್ ಪ್ಯಾಕೇಜ್ ಗೆ ಅತಿ ಕಡಿಮೆ ಎಂದರೆ 3,465 ರಿಯಾಲ್ ಮತ್ತು ಗರಿಷ್ಟ 11,905 ರಿಯಾಲ್ ದರ ನಿಗದಿಯಾಗಿದೆ. ಜೊತೆಗೆ ಮೌಲ್ಯವರ್ಧಿತ ತೆರಿಕೆ ಕೂಡ ಪಾವತಿಸಬೇಕಾಗುತ್ತದೆ. ಜನರಲ್ ಪ್ಯಾಕೇಜ್ (ಅಲ್ ದಿಯಾಫ), ಎಕಾನಮಿ 1 (ಇಖ್ತಿಸಾದಿ 1), ಎಕಾನಮಿ 2 (ಇಖ್ತಿಸಾದಿ 2) ಮುಂತಾದ ಹೆಸರುಗಳಲ್ಲಿ ಈ ವರ್ಷದ ಹಜ್ ದರಗಳು ನಿಗದಿಯಾಗಿದೆ.
ಹಜ್ ಸೇವಾ ರಂಗದಲ್ಲಿರುವ ಕಂಪೆನಿಗಳ ವಿವರಗಳು ಹಜ್ಜಾಜ್‌ಗಳಿಗೆ ಲಭಿಸಲಿರುವ ವಿವಿಧ ಸೇವೆಗಳ ವಿವರಗಳು ಹಜ್ ಸಚಿವಾಲಯದ ಪೋರ್ಟಲ್ ಮೂಲಕ ಲಭಿಸಲಿದೆ. ಈ ವರ್ಷ ಕಡಿಮೆ ದರದ ಪ್ಯಾಕೇಜ್ ಮೂಲಕ ಹೆಚ್ಚಿನ ಮಂದಿಗೆ ಹಜ್ ನಿರ್ವಹಿಸುವ ಅವಕಾಶ ಲಭಿಸಲಿದ್ದು, 190 ಹಜ್ ಸೇವಾ ಸಂಸ್ಥೆಗಳ ಮೂಲಕ 2,30,000 ಸ್ಥಳೀಯ ಹಜ್ಜಾಜ್‌ಗಳಿಗೆ ಅವಕಾಶ ಲಭಿಸಲಿದೆ.
ಇನ್ನಷ್ಟು ಸುದ್ದಿಗಳು
ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ ಪ್ರಮಾಣ ವಚನ ಸ್ವೀಕಾರ
ಭಾರತೀಯ ಮಣ್ಣಲ್ಲಿ ಹಳ್ಳಿ ನಿರ್ಮಿಸಿದ ಚೀನಾ- ಪ್ರಧಾನಿ ಮೌನವೇಕೆ?
ಟ್ರಂಪ್ ವಿದಾಯ ಭಾಷಣ- ಹೊಸ ಸರ್ಕಾರಕ್ಕೆ ಶುಭ ಹಾರೈಕೆ
ಗೋರಕ್ಷಕರ ಮೇಲಿನ ಎಲ್ಲಾ ಪ್ರಕರಣಗಳು ವಾಪಸ್- ಪಶು ಸಂಗೋಪನೆ ಸಚಿವ
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸುರತ್ಕಲ್: ಸೋಶಿಯಲ್ ಮೀಡಿಯಾ ಮೂಲಕ ಹನಿಟ್ರ್ಯಾಪ್- ನಾಲ್ವರ ಬಂಧನ