ಸೌದಿ: ಆರೋಗ್ಯ ವಲಯದಲ್ಲಿ ದೇಶೀಯ ಸಿಬ್ಬಂದಿಗಳ ಸಂಖ್ಯೆಯಲ್ಲಿ ಹೆಚ್ಚಳ

ರಿಯಾದ್: ಸೌದಿ ಅರೇಬಿಯಾದಲ್ಲಿನ ಆರೋಗ್ಯ ವಲಯದಲ್ಲಿ ಕಳೆದ ವರ್ಷ ದೇಶೀಯರಾದ ಸಿಬ್ಬಂದಿಯ ಸಂಖ್ಯೆಯಲ್ಲಿ ಶೇ. 11.9 ಹೆಚ್ಚಳ ಉಂಟಾಗಿದ್ದು, ವಿದೇಶೀಯರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಹೊಸ ಲೆಕ್ಕಾಚಾರ ಪ್ರಕಾರ ಆರೋಗ್ಯ ವಲಯದಲ್ಲಿ 4,42,700 ರಷ್ಟು ಸಿಬ್ಬಂದಿ ಇದ್ದು, ಒಂದು ವರ್ಷದಲ್ಲಿ 4.4 ಶೇಕಡಾ ಹೆಚ್ಚಳ ಉಂಟಾಗಿದೆ ಎಂದು ಅಂಕಿಅಂಶಗಳು ವ್ಯಕ್ತಪಡಿಸಿದೆ.

ಸ್ವದೇಶೀ ಸಿಬ್ಬಂದಿಯ ಸಂಖ್ಯೆಯಲ್ಲಿ 22,300 ರಷ್ಟು ಹೆಚ್ಚಳ ಈ ಕಾಲಾವಧಿಯಲ್ಲಿ ಕಂಡು ಬಂದಿದ್ದು, ವಿದೇಶೀ ಸಿಬ್ಬಂದಿಯ ಸಂಖ್ಯೆಯಲ್ಲಿ 3500 ದಷ್ಟು ಕಡಿಮೆ ಕಂಡು ಬಂದಿದೆ. ಕಳೆದ ವರ್ಷದ ಲೆಕ್ಕಾಚಾರದಂತೆ ಆರೋಗ್ಯ ವಲಯದಲ್ಲಿ ಶೇ. 47.2 ಸ್ವದೇಶೀಕರಣ ಕಂಡುಬಂದಿದೆ.

ಆರೋಗ್ಯ ವಲಯದಲ್ಲಿ ಅತೀ ಹೆಚ್ಚು ಸ್ವದೇಶೀಯರು ಆರೋಗ್ಯ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುತ್ತಾರೆ. ಆದರೆ ಖಾಸಗಿ ವಲಯದಲ್ಲಿನ ಸರಾಸರಿಯಲ್ಲಿ ಇದು ಇಳಿಕೆ ಕಂಡಿದ್ದು, ಶೇ.12 ಮಾತ್ರ ದಾಖಲಾಗಿದೆ. ಆರೋಗ್ಯ ವಲಯದಲ್ಲಿ ಅತಿ ಕಡಿಮೆ ದೇಶೀಕರಣವು ಫಾರ್ಮಸಿ ವಲಯದಲ್ಲಿ ಕಂಡುಬಂದಿದೆ. ಈ ವಲಯದಲ್ಲಿ ಬರೀ 24.3 ಶೇಕಡಾ ಸ್ವದೇಶೀಕರಣ ಉಂಟಾಗಿದೆ.

Leave a Reply

Your email address will not be published. Required fields are marked *

error: Content is protected !!