ದುಬೈ ವಿಮಾನ ನಿಲ್ದಾಣದಲ್ಲಿ ಸಂದರ್ಶಕರಿಗೆ ಉಚಿತ ಸಿಮ್ ಕಾರ್ಡ್

ದುಬೈ: ದುಬೈಗೆ ಬಂದಿಳಿಯುವ ಪ್ರವಾಸಿಗಳಿಗೆ ಉಚಿತ ಬಹುಮಾನಗಳನ್ನು ನೀಡುವ ಯೋಜನೆಗೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಸಂದರ್ಶಕರಿಗೆ ಉಪಯುಕ್ತವಾಗುವ ಉಚಿತ ಪ್ರೀ ಪೈಡ್ ಮೊಬೈಲ್ ಫೋನ್ ಸಿಮ್ ಕಾರ್ಡ್ಗಳನ್ನು ನೀಡಲಾಗುತ್ತಿದ್ದು, ಸಂದರ್ಶಕರಲ್ಲಿ ಉತ್ಸಾಹ ತುಂಬುವುದು ಯೋಜನೆಯ ಉದ್ದೇಶವಾಗಿದೆ.

ಒಂದು ತಿಂಗಳು ಕಾಲಾವಧಿ ಇರುವ ಡೂ ಸಿಮ್ ಕಾರ್ಡ್ ಗಳನ್ನು ವಿತರಿಸಲಾಗುವುದು. ಟ್ರಾನ್ಸಿಟ್ ವಿಸಾ, ಸಂದರ್ಶಕ ವಿಸಾ, ವಿಸಾ ಆನ್ ಅರೈವಲ್, ಜಿಸಿಸಿ ಪ್ರಜೆಗಳಿಗೆ ಈ ಯೋಜನೆ ಉಪಯುಕ್ತ ವಾಗಲಿದೆ.

ಎಮಿರೇಟ್ಸ್ ಇಂಟರ್ಗೇಟಡ್ ಟೆಲಿ ಕಮ್ಯುನಿಕೇಶನ್ಸ್ ಕಂಪೆನಿಯ ಕನಕ್ಟ್ ವಿಥ್ ಹ್ಯಾಪಿನೆಸ್ ಯೋಜನೆ ಭಾಗವಾಗಿ ಈ ಸಿಮ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ. ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ವರಿಗೆ ಮಾತ್ರ ಸಿಮ್ ಕಾರ್ಡ್ ಗಳನ್ನು ನೀಡಲಾಗುತ್ತಿದ್ದು, ಮೂರು ನಿಮಿಷಗಳ ಟಾಕ್ ಟೈಮ್ 20 ಎಂ.ಬಿ. ಮೊಬೈಲ್ ಡಾಟಾ ಇತ್ಯಾದಿ ಉಚಿತವಾಗಿ ಲಭ್ಯವಿರುವ ಸಿಮ್ ಕಾರ್ಡ್‌ಗಳನ್ನು ಎಮಿಗ್ರೇಷನ್ ಕೌಂಟರ್‌ ಮೂಲಕ ಹಸ್ತಾಂತರಿಸಲಾಗುತ್ತದೆ ಎಂದು ದುಬೈ ಎಮಿಗ್ರೇಷನ್ ಡೈರೆಕ್ಟರ್ ಜನರಲ್ ಮೇಜರ್ ಜನರಲ್ ಮುಹಮ್ಮದ್ ಅಲ್ ಮರ್ರಿ ಹೇಳಿದ್ದಾರೆ.

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 1,2,3 ಟರ್ಮಿನಲ್‌ಗಳ ಮೂಲಕ ತಲುಪುವವರಿಗೆ ಈ ಯೋಜನೆಯ ಸಿಮ್ ಲಭಿಸಲಿದೆ. ಸಂತೋಷದಾಯಕ ನಗರವಾಗಿ ದುಬೈಯನ್ನು ಸ್ಥಿರಗೊಳಿಸುವ ಭಾಗವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸ್ಮಾರ್ಟ್ ದುಬೈ ಕಾರ್ಯಾಲಯದ ಡೈರೆಕ್ಟರ್ ಜನರಲ್ ಡಾ.ಆಯಿಶಾ ಬಿನ್ತ್ ಬೂತಿ ಬಿನ್ ಬಿಷರ್ ಹೇಳಿದ್ದಾರೆ.

ಇಂತಹ ಸಿಮ್ ಲಭಿಸುವವರು ಯುಎಇಯಿಂದ ನಿರ್ಗಮಿಸಿದಾಗ ಸಿಮ್ ಕಾರ್ಡ್‌ಗಳು ನಿಶ್ಚಲವಾಗಲಿದೆ ಎಂದು ಡೂ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಫವಾದ್ ಅಲ್ ಹಾಸಾವಿ ಹೇಳಿದ್ದಾರೆ. ಸ್ಮಾಲ್, ಮೀಡಿಯಂ, ಲಾರ್ಜ್ ಪ್ಯಾಕೇಜ್‌ಗಳ ಮೂಲಕ ಸಿಮ್ ಟಾಪ್ ಅಪ್ ಮಾಡವುದು ಸಾಧ್ಯವಾಗಲಿದೆ.

Leave a Reply

Your email address will not be published. Required fields are marked *

error: Content is protected !!