ಯುಎಇ: ಚಾಲಕರು ಇದನ್ನು ಗಮನಿಸದಿದ್ದಲ್ಲಿ 3 ಸಾವಿರ ದಿರ್ಹಮ್ ದಂಡ ಪಾವತಿಸಬೇಕಾದೀತು

ದುಬೈ: ತುರ್ತು ವಾಹನಗಳಿಗೆ ದಾರಿ ಬಿಟ್ಟು ಕೊಡದವರಿಗೆ ಇನ್ನು ಮುಂದೆ 3000 ದಿರ್ಹಂ ದಂಡ ವಿಧಿಸಲಾಗುವುದು. ಮುಂದಿನ ತಿಂಗಳಿಂದ ಈ ಕಾನೂನು ಜಾರಿಗೆ ಬರಲಿದೆ ಎಂದು ಗೃಹ ಸಚಿವಾಲಯ ಸೋಮವಾರದಂದು ಟ್ವಿಟರ್ ಮೂಲಕ ತಿಳಿಸಿದೆ.

ಆ್ಯಂಬುಲೆನ್ಸ್, ಪೊಲೀಸ್, ತುರ್ತು ಇಲಾಖೆಗಳ ವಾಹನಗಳು, ಇತರ ಅಧಿಕೃತ ವಾಹನಗಳಿಗೆ ದಾರಿ ನೀಡದಿದ್ದಲ್ಲಿ 3000 ದಿರ್ಹಂ ದಂಡ ಮತ್ತು ಆರು ಕಪ್ಪು ಚುಕ್ಕೆಗಳನ್ನು ವಿಧಿಸಲಾಗುತ್ತದೆ. ಅದೂ ಅಲ್ಲದೆ 30 ದಿನಗಳ ವರೆಗೆ ಅಂತಹ ವಾಹನಗಳನ್ನು ಮುಟ್ಟುಗೋಲು ಮಾಡಲಾಗುವುದು. ಪ್ರಸ್ತುತ ಇಂತಹ ಉಲ್ಲಂಘನೆಗೆ 1000 ದಿರ್ಹಂ ದಂಡ ಮತ್ತು ಆರು ಕಪ್ಪು ಚುಕ್ಕೆಗಳನ್ನು ವಿಧಿಸಲಾಗುತ್ತಿದೆ.

ದಟ್ಟಣೆಯ ಹಾದಿಯಲ್ಲಿ ವಾಹನ ಚಲಾಯಿಸುವವರ ಯುಕ್ತಿಪೂರ್ವಕ ನಿಲುವು ಪ್ರಮುಖವಾಗಿದೆ. ತುರ್ತು ವಾಹನಗಳಿಗೆ ದಾರಿ ನೀಡದಿರುವುದು, ಅದರ ಹಿಂದೆ ವೇಗವಾಗಿ ಚಲಿಸುವುದು ಮುಂತಾದವು ಅಪರಾಧವಾಗಿದೆ. ತುರ್ತು ವಾಹನಗಳಿಗೆ ದಾರಿ ನೀಡುವ ಮೂಲಕ ಕಾನೂನು ಪಾಲನೆ ಮಾತ್ರವಲ್ಲದೆ ಒಂದು ಜೀವ ಉಳಿಸಲು ಸಹಾಯ ಮಾಡಿದಂತೆಯೂ ಆಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!