ಅಲ್ ಖಾದಿಸ ಎಜ್ಯುಕೇಶನಲ್ ಅಕಾಡೆಮಿ ಕಾವಳಕಟ್ಟೆ ರಿಯಾದ್ ಸಮಿತಿ ವಾರ್ಷಿಕ ಮಹಾಸಭೆ

ರಿಯಾದ್: ಅಲ್ ಖಾದಿಸ ಎಜ್ಯುಕೇಶನಲ್ ಅಕಾಡೆಮಿ ಕಾವಳಕಟ್ಟೆ ಇದರ ರಿಯಾದ್ ಸಮಿತಿಯ ವಾರ್ಷಿಕಮಹಾಸಭೆ ಹಾಗೂ ಆತ್ಮೀಯ ಮಜ್ಲಿಸ್ ಇತ್ತೀಚಿಗೆ ಬತ್ತಾ ಅಲ್ ಮಾಸ್ ಅಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಲ್ ಖಾದಿಸ ಸಂಸ್ಥೆಯ ಸ್ಥಾಪಕರೂ, ಚೆಯರ್ಮೆನ್ ಆದ ಡಾ ಮೌಲಾನ ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಮುಖ್ಯ ಅತಿಧಿಯಾಗಿ ಭಾಗವಹಿಸಿದ್ದರು. ರಿಯಾದ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕನ್ನಂಗಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯು ಕಳೆದ 4 ವರ್ಷಗಳಲ್ಲಿ 33 ಎಕರೆ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಗವಿಕಲರ ಶಾಲೆ, ಆಸ್ಪತ್ರೆ, ಬಡವರಿಗೆ ಮನೆ ನಿರ್ಮಾಣ, ಉನ್ನತ ದೀನೀ ವಿದ್ಯಾಸಮುಚ್ಚಯ ಹೀಗೆ ಹಲವಾರು ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದು ಇದುವರೆಗೂ ಸಂಪೂರ್ಣ ಸಹಕಾರ ನೀಡುತ್ತಾ ಬಂದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ ಖಾದಿಸ ರಿಯಾದ್ ಸಮಿತಿಯ ಬಗ್ಗೆ ಹಝ್ರತ್ ಕಾವಳಕಟ್ಟೆ ರವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ನಂತರ ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಬಜ್ಪೆ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ವೇದಿಕೆಯಲ್ಲಿ ಕೆ.ಸಿ.ಎಫ್ ರಿಯಾದ್ ಝೋನಲ್ ಅಧ್ಯಕ್ಷ ಫಾರೂಕ್ ಸಅದಿ ಎಚ್ಕಲ್ಲು, ನಝೀರ್ ಕಾಶಿಪಟ್ನ ಉಪಸ್ಥಿತರಿದ್ದರು. ಅಲ್ ಖಾದಿಸ ಸೌದಿ ಆರ್ಗನೈಸರ್ ಯೂಸುಫ್ ಮದನಿ ಸ್ವಾಗತ ಭಾಷಣ ಮಾಡಿದರು. ಆರಂಭದಲ್ಲಿ ಅಬ್ದುಲ್ ರಶೀದ್ ಮದನಿ ಉರುವಾಲು ಪಾದವು ಕಿರಾಅತ್ ಪಠಿಸಿ, ಕೊನೆಯಲ್ಲಿ ಧನ್ಯವಾಗೈದರು.

2019-20 ನೇ ಸಾಲಿನ ನೂತನ ಸಮಿತಿ: ಅಧ್ಯಕ್ಷರು – ಇಸ್ಮಾಹಿಲ್ ಕನ್ನಂಗಾರ್, ಉಪಾಧ್ಯಕ್ಷರುಗಳು – ದಾವೂದ್ ಕಜೆಮಾರ್, ಯೂಸುಫ್ ಕಳಂಜಿಬೈಲ್, ಪ್ರ.ಕಾರ್ಯದರ್ಶಿ – ಅಬ್ದುಲ್ ಅಝೀಝ್ ಬಜ್ಪೆ, ಜೊತೆ ಕಾರ್ಯದರ್ಶಿಗಳು – ಹಂಝ ಮೈದಾಳ, ಅನ್ಸಾರ್ ಉಳ್ಳಾಲ, ಕೋಶಾಧಿಕಾರಿ – ಅಬೂಬಕರ್ ಸಾಳೆತ್ತೂರು, ಆರ್ಗನೈಸಿಂಗ್ ಸೆಕ್ರೆಟರಿಗಳು – ನವಾಝ್ ಚಿಕ್ಕಮಗಳೂರು, ರಾಝಿಕ್ ಬಜ್ಪೆ, ಹನೀಫ್ N.S, ಸಲಹೆಗಾರರು ನಝೀರ್ ಕಾಶಿಪಟ್ನ, ಕಾಸಿಂ ತಲ್ಹತ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಝಾಂ ಸಾಗರ, ಉಮರ್ ಅಳಕೆಮಜಲು, ಅಬ್ದುಲ್ ರಹಿಮಾನ್ ಮದನಿ, ಮುಹಮ್ಮದ್ ಸಿತಾರ್, ಬಶೀರ್ ತಲಪಾಡಿ, ಮುಹಮ್ಮದ್ ನೇರಳಕಟ್ಟೆ, ಅಬ್ದುಲ್ ಖಾದರ್ ಸಾಲೆತ್ತೂರು, ಝಹೀರ್ ಅಬ್ಬಾಸ್, ಆಸಿಫ್ ಕಾವಳಕಟ್ಟೆ, ಇಫ್ತಿಕಾರ್ ಕಾವಳಕಟ್ಟೆ, ಇರ್ಫಾನ್ ನೆಲ್ಯಾಡಿ, ಹನೀಫ್ ಅಡ್ಯಾರ್ ಕಣ್ಣೂರು, ರಮೀಝ್ ಕುಲಾಯಿ, ಹಸನ್ ಸಾಗರ್, ಅಮೀರ್ ಕಲ್ಲಾಪು, ಶಮೀರ್ ಉಳ್ಳಾಲ, ಝಾಹಿದ್ ಮೂಡಿಗೆರೆ, ರಿಹಾನ್ ಬೆಳುವಾಯಿ, ರಿಯಾಝ್ ಅಮ್ಮುಂಜೆ ರವರನ್ನು ಆಯ್ಕೆಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!