janadhvani

Kannada Online News Paper

ಕಠುವಾ ತೀರ್ಪು: ನ್ಯಾಯಾಂಗದ ಮೇಲಿನ ನಂಬಿಕೆಯನ್ನು ವರ್ಧಿಸುತ್ತಿದೆ- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಕ್ಯಾಲಿಕಟ್: ದೇಶವನ್ನೇ ಬೆಚ್ಚಿಬೀಳಿಸಿದ ಕಠುವಾ ಬಾಲಕಿಯ ಹತ್ಯೆ ಪ್ರಕರಣದ ಕೋರ್ಟು ತೀರ್ಪು, ನ್ಯಾಯಾಂಗದ ಮೇಲಿರುವ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.

ಕಾಶ್ಮೀರದ ಕಠುವಾದಲ್ಲಿ ಎಂಟರ ಹರೆಯದ ಬಾಲೆಯ ಮೇಲೆ ಮನುಷ್ಯತ್ವವಿಲ್ಲದ ರಾಕ್ಷಸರು ನಡೆಸಿದ ಪೈಶಾಚಿಕ ಕೃತ್ಯದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಕಠುವದ ಬಾಲಕಿಯ ಕುಟುಂಬಕ್ಕೆ ಆರ್ಥಿಕ ಹಾಗೂ ಕಾನೂನಿನ ಹೋರಾಟಕ್ಕೆ ಎಲ್ಲಾ ವಿಧ ನೆರವನ್ನು ನೀಡಲು ಕಾರಂದೂರ್ ಮರ್ಕಝ್ ಸಂಸ್ಥೆಯು ಮುಂಚೂಣಿಯಲ್ಲಿತ್ತು, ಬಾಲಕಿಯ ಸಹೋದರಿಯ ವಿದ್ಯಾಭ್ಯಾಸದ ಖರ್ಚುವೆಚ್ಚವನ್ನು ಬರಿಸಲು ಕಾಶ್ಮೀರದ ಮರ್ಕಝ್ ಸಂಸ್ಥೆಯು ವಹಿಸಿಕೊಂಡಿತ್ತು, ಇದೀಗ ಕುಟುಂಬಕ್ಕೆ ತ್ವರಿತ ನ್ಯಾಯ ಸಿಕ್ಕಿದ್ದು, ಸಂತಸ ತಂದಿದೆ.

ಬಾಲಕಿಯ ಕುಟುಂಬವನ್ನು ಸಂರಕ್ಷಿಸಲು ಅವಶ್ಯಕವಾದ ಎಲ್ಲಾ ಕಾರ್ಯವನ್ನು ಮಾಡಲಾಗುವುದು, ಮರ್ಕಝ್ ಅಧೀನದಲ್ಲಿ ಕಾಶ್ಮೀರದಲ್ಲಿ 40 ಶಿಕ್ಷಣ ಸಂಸ್ಥೆಗಳು ಕಾರ್ಯಚರಿಸುತ್ತಿದೆ, ಆದ್ದರಿಂದ ಬಾಲಕಿಯ ಸಹೋದರಿಗೆ ಅತ್ಯಾಧುನಿಕ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಅವರು ಹೇಳಿದರು.
ಮೂಲ : ಸಿರಾಜ್ ಡೈಲಿ
ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com