ರಿಯಾದ್: ಸಂದರ್ಶಕ ವಿಸಾ ನವೀಕರಿಸಲು ಹೆಲ್ತ್ ಇನ್ಶೂರೆನ್ಸ್ ಕಡ್ಡಾಯ ಎಂದು ಪಾಸ್‌ಪೋರ್ಟ್ ವಿಭಾಗ ಮತ್ತೊಮ್ಮೆ ತಿಳಿಸಿದೆ. ಈ ಕುರಿತು ಮತ್ತೊಮ್ಮೆ ವಿಚಾರಣೆ ಉಂಟಾದ ಕಾರಣ ಈ ಮಾಹಿತಿಯನ್ನು ನೀಡಿದೆ.
ಪಾಸ್‌ಪೋರ್ಟ್ ವಿಭಾಗದ ಅಧಿಕೃತ ಟ್ವಿಟರ್ ಖಾತೆ ಮೂಲಕ ಆಶ್ರಿತರ ಸಂದರ್ಶಕ ವಿಸಾ ನವೀಕರಣೆಗಿರುವ ಮಾನದಂಡವು ಹೆಲ್ತ್ ಇನ್ಶೂರೆನ್ಸ್ ಪಡೆಯುವುದಾಗಿದೆ ಎಂದು ತಿಳಿಸಿದೆ. ಕಳೆದ ಜನವರಿಯಲ್ಲಿ ಈ ಬಗ್ಗೆ ಪಾಸ್‌ಪೋರ್ಟ್ ವಿಭಾಗವು ಮಾಹಿತಿ ನೀಡಿತ್ತು. ಆದರೂ, ಈ ಬಗೆಗೆ ಸಾರ್ವಜನಿಕರಿಂದ ಅನ್ವೇಷಣೆ ಉಂಟಾದ ಕಾರಣ ಇನ್ಶುರೆನ್ಸ್ ಕಡ್ಡಾಯ ಎನ್ನುವ ಮಾಹಿತಿಯನ್ನು ಮತ್ತೊಮ್ಮೆ ತಿಳಿಸಲಾಗಿದೆ.
ಇನ್ಶೂರೆನ್ಸ್ ಪಡೆಯುವುದು ಜವಾಝಾತ್‌ಗೆ ಒಳಪಡುವ ಕಾರ್ಯವಲ್ಲ. ಇನ್ಶೂರೆನ್ಸ್ ಕಾರ್ಯಗಳು ಪೂರ್ಣಗೊಂಡ ಬಳಿಕ ಅಬ್ಶೀರ್ ಮೂಲಕ ಸಂಬಂಧಪಟ್ಟವರ ವಿಸಾ ನವೀಕರಣದ ಸೌಕರ್ಯ ಲಭ್ಯವಾಗಲಿದೆ. ವಿದೇಶಾಂಗ ಸಚಿವಾಲಯದ ವಿಸಾ ಸರ್ವೀಸ್ ಪ್ಲಾಟ್ಫಾರಮ್ ಆದ ಇನ್ಜಾಸ್ ಮೂಲಕ ಇನ್ಶೂರೆನ್ಸ್ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
2018ನೇ ನವೆಂಬರ್‌ನಿಂದ ವಿದೇಶಿಗಳ ಸಂದರ್ಶಕ ವಿಸಾಗೆ ಇನ್ಶೂರೆನ್ಸ್ ಕಡ್ಡಾಯ ಎಂಬುದನ್ನು ಸಿಸಿಎಚ್‌ಐ ಬಹಿರಂಗ ಪಡಿಸಿತ್ತು.