janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ರಿಯಾದ್: ಮಧ್ಯಾಹ್ನದ ಹೊತ್ತಿನಲ್ಲಿ ಕೆಲಸ ಮಾಡುವುದರ ಮೇಲಿನ ನಿಷೇಧವು ಸೌದಿ ಅರೇಬಿಯಾದಲ್ಲಿ ಮುಂದಿನ ವಾರದಿಂದ ಆರಂಭವಾಗಲಿದೆ. ಮೂರು ತಿಂಗಳ ಈ ನಿಷೇಧ ಕಾಲಾವಧಿಯಲ್ಲಿ ಮಧ್ಯಾಹ್ನ 12ರಿಂದ ಅಪರಾಹ್ನ 3ರ ವರೆಗೆ ಕಾರ್ಮಿಕರಿಂದ ಕೆಲಸ ಮಾಡಿಸುವಂತಿಲ್ಲ.

ಕಠಿಣ ಬೇಸಿಗೆ ಕಾಲದಲ್ಲಿ ಪ್ರತೀ ವರ್ಷ ನೀಡಲಾಗುವ ಮಧ್ಯಾಹ್ನದ ವಿಶ್ರಾಂತಿಯನ್ನು ಈ ಅವಧಿಯಲ್ಲೂ ನೀಡಲು ಅಲ್ಲಿನ ಅಧಿಕಾರಿಗಳು ತೀರ್ಮಾನಿಸಿದ್ದು, ಜೂನ್ 15ರಿಂದ ಸೆಪ್ಟೆಂಬರ್ 15ರ ವರೆಗಿನ ಮೂರು ತಿಂಗಳು ಈ ವಿಶ್ರಾತಿ ಸೌಕರ್ಯ ಲಭಿಸಲಿದೆ. ಸೂರ್ಯ ತಾಪ ದೇಹಕ್ಕೆ ತಗುಲುಂತೆ ಕೆಲಸ ಮಾಡುವುದಕ್ಕೆ ನಿಷೇಧವನ್ನು ಜಾರಿಗೆ ತಂದಿರುವುದಾಗಿ ಕಾರ್ಮಿಕ, ಸಾಮಾಜಿಕ, ಅಭಿವೃದ್ದಿ ಸಚಿವಾಲಯ ತಿಳಿಸಿದೆ.

ಖಾಸಗಿ ಕಂಪೆನಿಗಳಲ್ಲಿ ಮತ್ತು ಸಂಸ್ಥೆಗಳಲ್ಲಿನ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಈ ಕಾನೂನನ್ನು ಪಾಲಿಸಲಾಗುತ್ತಿದೆ. ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಲ್ಲಲಾಗುವುದು ಎಂದು ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com