janadhvani

Kannada Online News Paper

ನವದೆಹಲಿ (ಜೂನ್​.11); ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಬರವಣಿಗೆ ಸಂಬಂಧ ಪತ್ರಕರ್ತನನ್ನು ಬಂಧಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಡೆ ಮೂರ್ಖತನದಿಂದ ಕೂಡಿದ್ದಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟರ್​ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, “ನನ್ನ ವಿರುದ್ದ ಸುಳ್ಳು ವರದಿಯನ್ನು ದಾಖಲಿಸುವ ಹಾಗೂ ನಕಲಿ ವಿಚಾರಗಳನ್ನು ಹರಡುವ ಆರ್​ಎಸ್​ಎಸ್​ ಹಾಗೂ ಬಿಜೆಪಿ ಪ್ರಾಯೋಚಿತ ಪ್ರಚಾರ ಮಾಡುವ ಪತ್ರಕರ್ತರನ್ನು ಜೈಲಿಗೆ ಅಟ್ಟುವುದಾದರೆ ಇಂದು ಎಲ್ಲಾ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಕಚೇರಿಗಳಲ್ಲಿ ಸಿಬ್ಬಂದಿಯ ಕೊರತೆ ಎದುರಾಗುತ್ತದೆ” ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಯೋಗಿ ಆದಿತ್ಯನಾಥ್ ನಡೆಯನ್ನು ಮೂರ್ಖತನದ ನಡೆ ಎಂದು ಟೀಕಿಸಿದ್ದಾರೆ.

error: Content is protected !! Not allowed copy content from janadhvani.com