janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಬೆಂಗಳೂರು.ಜೂನ್,4:ಎಲ್ಲಾಕಡೆ ಮಂಗಳವಾರ ರಾತ್ರಿ ಚಂದ್ರ ದರ್ಶನವಾಗಿದ್ದು, ಬುಧವಾರ ರಾಜ್ಯಾದ್ಯಂತ ಈದ್‌ ಉಲ್‌ ಫಿತ್ರ್ ಆಚರಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರಿನ ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಮೊಹಮದ್ ಮಸೂದ್‌ ಇಮ್ರಾನ್ ರಶ್ದಿ ತಿಳಿಸಿದ್ದಾರೆ.

ವಕ್ಫ್ ಬೋರ್ಡ್ ಕಚೇರಿಯಲ್ಲಿ ರಾಜ್ಯ ಚಂದ್ರದರ್ಶನ ಸಮಿತಿಯು ಮಂಗಳವಾರ ರಾತ್ರಿ ಸಭೆ ನಡೆಸಿತು. ರಾಜ್ಯದಲ್ಲಿ ಚಂದ್ರದರ್ಶನವಾಗಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಬುಧವಾರವೇ ಈದುಲ್ ಫಿತ್ರ್ ಆಚರಿಸಲು ಧಾರ್ಮಿಕ ಮುಖಂಡರು ತೀರ್ಮಾನಿಸಿದ್ದಾರೆ ಎಂದು ಮಸೂದ್‌ ಇಮ್ರಾನ್‌ ರಶ್ದಿ ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್, ಕಾಂಗ್ರೆಸ್‌ ಮುಖಂಡ ಬಾವಾ ಹಾಗೂ ಮುಸಲ್ಮಾನ್‌ ಧರ್ಮದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಗಣ್ಯರ ಶುಭಾಶಯ:

ಬುಧವಾರ ರಂಜಾನ್‌ ಆಚರಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ನಾಡಿನ ಹಿರಿಯ ಮುಖಂಡರು ಶುಭ ಕೋರಿದ್ದಾರೆ.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು. ಶಾಂತಿ ಸೌಹಾರ್ದತೆಯ ಪ್ರತೀಕವಾದ ರಂಜಾನ್ ನಾಡಿನ ಜನತೆಗೆ ಸುಖ, ಸಮೃದ್ಧಿಯನ್ನು ತರಲಿ .

error: Content is protected !! Not allowed copy content from janadhvani.com