janadhvani

Kannada Online News Paper

ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದ ಹಲವರು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಕೆಲವರು ಹಿಂದುತ್ವದ ಕಾರಣ, ಇನ್ನು ಕೆಲವರು #EVM ಹ್ಯಾಕ್ ಬಗ್ಗೆನೂ ಬರೆಯುತ್ತಿದ್ದಾರೆ.

ಆದರೆ ಇಲ್ಲಿ ಹ್ಯಾಕ್ ಆಗಿರುವುದು EVM ಅಲ್ಲ‌. ಮನಸ್ಸಾಗಿದೆ‌. ಭಯ ಎಂಬ ಅಸ್ತ್ರ ದಿಂದ ಮನಸ್ಸನ್ನು ಹ್ಯಾಕ್ ಮಾಡಿದ್ದಾರೆ. ಇದೇ ಆಗಿದೆ ನಿಜವಾದ ಮೋದಿ, ಅಮಿತ್ ಷಾ ನ ಗುಜರಾತ್ ಮಾಡಲ್!

ಇದು ಈಗ ನಡೆದದ್ದಲ್ಲ. ಹಲವು ವರ್ಷಗಳ ಪರಿಶ್ರಮವಾಗಿದೆ. ಗುಜರಾತ್ ನಲ್ಲಿ ಹಲವು ವರ್ಷಗಳ ಕಾಲದಿಂದ ಇದು ಚಾಲ್ತಿಯಲ್ಲಿದೆ. ಆದರೆ ದೇಶದ ಉಳಿದ ಭಾಗಗಳಲ್ಲಿ ಅದು ಅಷ್ಟರ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಯಾವಾಗ ಮೋದಿ, ಅಮಿತ್ ಷಾ ಒಂದಾದರೋ ಆವಾಗ ಶುರು ಆಯಿತು ಈ ಪ್ರಕ್ರಿಯೆ.

ಈ ಭಯ ಕೇವಲ ಒಂದು ವಿಧದಲ್ಲಿ ಅಲ್ಲ. ಹಲವು ತರಹದ ಭಯಗಳನ್ನು ಸೃಷ್ಟಿಸಲಾಗಿದೆ. ಒಂದೊಂದು ರಾಜ್ಯಕ್ಕೆ, ಊರಿಗೆ, ಜನರಿಗೆ ಪೂರಕವಾಗುವಂತಹ ಭಯ ನೀಡುವುದು.

ಮೊದಲನೇಯದಾಗಿ, ಉಗ್ರವಾದದ ಬಗ್ಗೆ ಭಯ ಉಟ್ಟಿಸುವುದು. ಪಾಕಿಸ್ತಾನದ ಹೆಸರೇಲಿ ರಾಷ್ಟಪ್ರೇಮ ಅಂತ ಹೇಳಿ ಜನರ ಮನಸ್ಸಲ್ಲಿ ಭಯ ಹುಟ್ಟಿಸುವುದು. ಈ ತರಹದ ಭಯ ನಗರ ಪ್ರದೇಶಗಳಲ್ಲಿ, ಎಜ್ಯುಕೇಟಡ್ ಜನರಲ್ಲಿ ಹುಟ್ಟಿಸಲಾಯಿತು. ಅದಕ್ಕೆ ಪೂರಕವಾಗಿ ಕಾರ್ಪೊರೇಟ್ ಮಾಧ್ಯಮಗಳ ಮೂಲಕ ಇದಕ್ಕೆ ಒತ್ತು ನೀಡಲಾಯಿತು.

ಎರಡನೇಯದಾಗಿ, ಹಿಂದುತ್ವದ ಮೂಲಕ, ಹಿಂದೂ ರಾಷ್ಟ್ರದ ಕನಸ್ಸು ಅದಕ್ಕೆ ಮುಸ್ಲಿಮರನ್ನು ತೋರಿಸುತ್ತಾ ಭಯ ಹುಟ್ಟಿಸಲಾಯಿತು. ಇದರಲ್ಲಿ ರಾಹುಲ್ ಗಾಂಧಿಯವರು ಕೇರಳದ ವಯನಾಡ್ ನಲ್ಲಿ ಸ್ಪರ್ಧೆ ಮಾಡಿದ್ದು ಇವರಿಗೆ ಉಪಕಾರವಾಯಿತು.
ಮುಸ್ಲಿಂ ಲೀಗ್ ನ ಹಸಿರು ಬಾವುಟ ತೋರಿಸಿ ಜನರಲ್ಲಿ ಕಾಂಗ್ರೆಸ್ ಬಂದರೆ ಪಾಕಿಸ್ತಾನ ಮಾಡುತ್ತಾರೆ. ಅಂತ ಜನರಲ್ಲಿ ಸುಳ್ಳು ಸುದ್ದಿ ಭಿತ್ತರಿಸಿ ಭಯ ಹುಟ್ಟಿಸಲಾಯಿತು.
ಈ ತರಹದ ಭಯ ಹಿಂದೂಗಳು ಹೆಚ್ಚಿರುವ ಹಳ್ಳಿಗಳಲ್ಲಿ ವರ್ಕೌಟ್ ಆಯಿತು.

ಮೂರನೆಯದು, ಅಧಿಕಾರ ಬಲ, ಹಣಬಲದ ಮೂಲಕ ಜನರನ್ನು ಹೆದರಿಸಿ ಭಯ ಹುಟ್ಟಿಸಲಾಯಿತು. ಅದಕ್ಕೆ ಅವರಿಗೆ ಸಿಕ್ಕಿದ್ದು ಬಡವರು, ದಲಿತರು, ಹಿಂದುಳಿದ ವರ್ಗದವರು.

ಇದಕ್ಕೆ ಪೂರಕವಾದ ಹಲವು ಉದಾಹರಣೆಗಳು ನೀವು ಮಾದ್ಯಮಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ನೋಡಿರಬಹುದು.

ಮೇನಕಾ ಗಾಂಧಿಯವರು ಬಡ ಮುಸ್ಲಿಮರಿಗೆ ನನಗೆ ವೋಟ್ ಹಾಕದಿದ್ದರೆ ನಿಮ್ಮ ಯಾವುದೇ ಕೆಲಸ ಮಾಡಲ್ಲ ಅಂತ ಹೆದರಿಸುವುದು.

ಅದೇ ತರಹ ಮತ್ತೊಬ್ಬ ಬಿಜೆಪಿ ನಾಯಕ ಒಂದು ಹಳ್ಳಿಯಲ್ಲಿ ಹೋಗಿ ನೀವು ನನಗೆ ಮತ ಹಾಕದಿದ್ದರೆ ನನಗೆ ಅದು ಗೊತ್ತಾಗುತ್ತದೆ. ಮತಕ್ಷೇತ್ರದಲ್ಲಿ ನಮ್ಮ ಜನರಿದ್ದಾರೆ. ಅಲ್ಲಿ CC ಕ್ಯಾಮರಾ ಇದೆ. ಒಂದು ವೇಳೆ ಆ ತರಹ ಯಾರಾದರೂ ನನಗೆ ಮತ ಹಾಕದಿದ್ದರೆ ಅವರ ಕುಟುಂಬವನ್ನೇ ಸರ್ವನಾಶ ಮಾಡುತ್ತೇನೆ ಅಂತ ಅವರಿಗೆ ಓಪನ್ ಆಗಿ ಭಯ ಹುಟ್ಟಿಸುವುದು.

ಅದೇ ತರಹ ಹಲವು ಕಡೆ ಗಿರಿಜನರು, ತೀರಾ ವಿದ್ಯೆ ಇಲ್ಲದಂತಹ ಜನರು ವಾಸಿಸುವ ಸ್ಥಳಗಳಲ್ಲಿ ಚುನಾವಣಾ ಅಧಿಕಾರಿಗಳ ಮೂಲಕ ಬೂತ್ ಕ್ಯಾಪ್ಚರ್ ಮಾಡಿ, ಜನರಿಗೆ ಮತ ಹಾಕಲು ಬಿಡದೆ ಬಿಜೆಪಿ ಕಾರ್ಯಕರ್ತರೇ ಮತ ಹಾಕುವುದು, ಹಲವು ಕಡೆ ಚುನಾವಣೆಯ ಒಂದು ದಿನ ಮುಂಚೆಯೇ ಬಡವರನ್ನು ಹೆದರಿಸಿ ಕೈಗಳಿಗೆ ಶಾಯಿ ಹಾಕಿ ಮತ ಹಾಕದಂತೆ ಮಾಡಿದ್ದು..

ಈ ತರಹ ಹಲವು ವೀಡಿಯೋಗಳು ನಾವು ಕಂಡಿದ್ದೇವೆ.‌ಅದೆಲ್ಲ ಕೇವಲ ಸ್ಯಾಂಪಲ್ ಮಾತ್ರ. ಅಂತಹ ಸಾವಿರಾರು ಪ್ರಕರಣಗಳು ನಡೆದಿದೆ. ಅದೆಲ್ಲಾ ಸದ್ದಿಲ್ಲದೆ ಮುಚ್ಚಿ ಹೋಗಿದೆ. ಅದಕ್ಕೆಲ್ಲ ಕಾರಣ ಭಯ.

ಯಾಕೆಂದರೆ ಯಾರಾದರೂ ಅದರ ಬಗ್ಗೆ ಮಾತನಾಡಿದರೆ ಅವರ ಜೀವಕ್ಕೆ ಅಪಾಯ. ಅಥವಾ ಚುನಾವಣಾ ಅಧಿಕಾರಿಗಳೇ ಜನರನ್ನು ಸುಳ್ಳು ಆದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಅಂತ ಭಯ ಹುಟ್ಟಿಸಿದ್ದಾರೆ..

ಇಂತಹ ಭಯಕ್ಕೆ ಒಂದು ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಮುಝ್ಫರ್ ನಗರ. ಕೆಲವು ವರ್ಷಗಳ ಮುಂಚೆ ಅಲ್ಲಿ ನಡೆದ ಕೋಮು ಗಲಭೆ ನಿಮಗೆಲ್ಲ ತಿಳಿದಿರ ಬಹುದು. ಸಾವಿರಾರು ಮುಸ್ಲಿಂ ಕುಟುಂಬಗಳು ಅಲ್ಲಿಂದ ಪಲಾಯನ ಮಾಡಿದ್ದರು. ಅದರಲ್ಲಿ ಅಲ್ಲಿ ಮತ್ತೆ ಹಿಂದಿರುಗಿ ಬಂದಿದ್ದ ಒಂದು ಮುಸ್ಲಿಂ ಕುಟುಂಬದ ಜೊತೆ ಒಬ್ಬ ಮಾಧ್ಯಮದವ ಮಾತನಾಡುವಾಗ ಆ ಮುಸ್ಲಿಂ ವೃದ್ಧ ಹೇಳಿದ ಮಾತು, ನಾವು ಬಿಜೆಪಿಗೆ ಮತ ಹಾಕುತ್ತೇವೆ. ಯಾಕೆಂದರೆ ನನಗೆ ನನ್ನ ಕುಟುಂಬದವರನ್ನು ಕಾಪಾಡಬೇಕಿದೆ!.

ಇದಾಗಿದೆ ಭಯ. ಜೀವದ ಭಯ. ಕುಟುಂಬದ ಭಯ‌‌!!

ಇನ್ನು ನಾಲ್ಕನೆಯದು, ವಸಾಹತು ಜನರ ಭಯ.
ಇದು ನಮ್ಮ ಪಶ್ಚಿಮ ಭಾರತದಲ್ಲಿ ಬಿಜೆಪಿ ಜನರ ಮನಸ್ಸಿನಲ್ಲಿ ಸೃಷ್ಟಿಸಿದ್ದು. ಬಾಂಗ್ಲಾದೇಶದಿಂದ, ರೋಹಿಂಗ್ಯಾದಿಂದ ವಲಸೆ ಬರುವ ಮುಸ್ಲಿಮರನ್ನು ಉಗ್ರವಾದಿಗಳ ಹಾಗೆ ಚಿತ್ರಿಸಿ ಅವರಿಗೆ ಸಪೋರ್ಟ್ ಮಾಡುವ ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಉಗ್ರವಾದಿಗಳಿಗೆ ಸಪೋರ್ಟ್ ಮಾಡುವ ಪಕ್ಷ ಅಂತ ಚಿತ್ರಿಸಿ ಅಲ್ಲಿಯ ಹಿಂದೂ ಧರ್ಮದ ಜನರ ಮನಸ್ಸಿನಲ್ಲಿ ಭಯ ಉಂಟು ಮಾಡಿದರು. ಅದರ ಪರಿಣಾಮ ಏನು ನಾವೆಲ್ಲರೂ ಚುನಾವಣಾ ಫಲಿತಾಂಶದಲ್ಲಿ ನೋಡಿದ್ದೇವೆ.

ಈ NRC ಪರಿಣಾಮ ದೇಶದ ಹಲವು ನಗರಗಳಲ್ಲಿ ಪರಿಣಾಮ ಬೀಳುವಂತೆ, ಅದನ್ನು ಬಿಜೆಪಿಯ ಪರವಾಗಿ ಬರುವಂತೆ ನಮ್ಮ ದೇಶದ ಮಾಧ್ಯಮಗಳು ಬಹಳ ಕಷ್ಟ ಬಂದಿದೆ. ಅದು ಸಕ್ಸಸ್ ಕೂಡಾ ಆಗಿದೆ.

ಕೊನೆಯದಾಗಿ ಅಧಿಕಾರ,ಹೆಸರು ಹೋಗುವ ಭಯ!!
ಇದಾಗಿದೆ ಗುಜರಾತ್ ಮಾಡಲ್..

ಸರಕಾರಿ ಅಧಿಕಾರಿಗಳನ್ನು ಹೆದರಿಸಿ ಭಯ ಹುಟ್ಟಿಸುವುದು.

ಇದಕ್ಕಾಗಿಯೇ ಮೋದಿಯವರು ದೇಶದ ಹಲವು ಉನ್ನತ ಹುದ್ದೆಗಳಲ್ಲಿ ಗುಜರಾತ್ ನ ಹಲವರನ್ನು ನೇಮಿಸಿದ್ದು. CBI, RBI, ED, ECI ಈ ತರಹ ಹಲವು ಹುದ್ದೆಗಳಲ್ಲಿ ಇವರಿಗೆ ಬೇಕಾದ ಮಾತ್ರವಲ್ಲ ಅವರ ತಪ್ಪುಗಳು ಇವರಿಗೆ ತಿಳಿದಿರುವ ಜನರನ್ನು ನೇಮಕ ಮಾಡಿದ್ದು.

ತಪ್ಪುಗಳು ಗೊತ್ತಿರುವವರನ್ನು ಯಾಕೆ ನೇಮಕ ಮಾಡಿದ್ದು ಅಂದರೆ(ಉದಾಹರಣೆಗೆ ECI Chief) ಅವರನ್ನು ಹೆದರಿಸಿ ಭಯ ಉಂಟು ಮಾಡಿ ತಮಗೆ ಬೇಕಾದ ಹಾಗೆ ಅವರನ್ನು ಉಪಯೋಗ ಮಾಡಲು.
ECI ದವರು ಯಾವ ರೀತಿಯಲ್ಲಿ ಇವರಿಗೆ ಉಪಕಾರ ಮಾಡಿದ್ದಾರೆ ಅಂತ ಇಡೀ ದೇಶವೇ ಕಂಡಿಡೆ‌‌‌‌

ಇವರು ಸೃಷ್ಟಿಸಿರುವ ಭಯಕ್ಕೆ ಒಂದು ಸ್ಪಷ್ಟ ಉದಾಹರಣೆ ಚೀಫ್ ಜಸ್ಟಿಸ್. ಅವರ ಮೇಲಿರುವ Molestation ಕೇಸ್ ತೋರಿಸಿ ಅವರನ್ನು ಹೆದರಿಸಿ #ರಫೆಳ್ ಹಗರಣದ ತೀರ್ಪು ಮಾಡಿಸಿದ್ದು ಎಲ್ಲರಿಗೂ ಗೊತ್ತಿದೆ ತಾನೇ?

ಇದೆಲ್ಲ ಕೆಲವು ಉದಾಹರಣೆಗಳು ಮಾತ್ರ. ಇಂತಹ ಎಷ್ಟೋ ವಿಷಯಗಳು ಇವೆ.

ಈ ಭಯದ ವಾತಾವರಣದಿಂದ ದೇಶದ ಜನರನ್ನು ಹೊರ ತರುವುದೇ ಒಂದು ದೊಡ್ಡ ಸವಾಲು. ಯಾಕೆಂದರೆ ಈ ಭಯದ ಮುಂದೆ ಅವರಿಗೆ ಏನೂ ಬೇಡ. ಕೆಲಸ ಇಲ್ಲದಿದ್ದರೂ ಪರವಾಗಿಲ್ಲ, ರೈತರು ಆತ್ಮಹತ್ಯೆ ಮಾಡಿದರೂ ಲೆಕ್ಕಕ್ಕಿಲ್ಲ, ಕೈಯಲ್ಲಿ ಹಣ ಇಲ್ಲದಿದ್ದರೂ ಪರವಾಗಿಲ್ಲ. ಬಡತನ ಜಾಸ್ತಿಯಾದರೂ ವಿಷಯವೇ ಅಲ್ಲ. ಯಾಕೆಂದರೆ ಭಯ ಮನಸ್ಸನ್ನು ಹ್ಯಾಕ್ ಮಾಡಿ ಬಿಟ್ಟಿದೆ. ಚಿಂತಿಸುವ ಶಕ್ತಿಯೇ ಇಲ್ಲದಂತಾಗಿದೆ!!

ಸಂಕ್ಷಿಪ್ತವಾಗಿ ಹೇಳುವುದಾದರೆ ಭಯದ ಮುಂದೆ ಜನಾದೇಶ ಮಂಡಿಯೂರಿದೆ!!


MHB Ullal

error: Content is protected !! Not allowed copy content from janadhvani.com