ಅಮೆರಿಕಾ ಜತೆ ಯುದ್ಧವಿಲ್ಲ- ಇರಾನ್‌ ವಿದೇಶಾಂಗ ಸಚಿವ

ಟೆಹರಾನ್‌: ಅಮೆರಿಕ ಜತೆ ಯುದ್ಧ ನಡೆಸುವ ಸಾಧ್ಯತೆಗಳನ್ನು ಇರಾನ್‌ ತಳ್ಳಿ ಹಾಕಿದೆ. ‘ಯುದ್ಧವನ್ನು ಇರಾನ್‌ ವಿರೋಧಿಸುತ್ತಿದೆ. ಯುದ್ಧ ನಡೆಯುವುದಿಲ್ಲ. ನಮಗೆ ಯುದ್ಧ ಬೇಕಾಗಿಲ್ಲ. ನಮ್ಮ ಜತೆ ಸಂಘರ್ಷ ನಡೆಸಬೇಕು ಎನ್ನುವ ಭ್ರಮೆಯಲ್ಲೂ ಯಾರು ಇರಬಾರದು’ ಎಂದು ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜಾವೇದ್‌ ಝರೀಫ್‌ ತಿಳಿಸಿದ್ದಾರೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೂ ಯದ್ಧ ಬೇಕಾಗಿಲ್ಲ. ಆದರೆ, ಅಮೆರಿಕವನ್ನು ಬಲಿಷ್ಠಗೊಳಿಸಬೇಕು ಎನ್ನುವ ಭ್ರಮೆಯಲ್ಲಿರುವ ಕೆಲವರು ಟ್ರಂಪ್‌ ಅವರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. 2015ರ ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ ಇರಾನ್‌ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದ ಬಳಿಕ ಉಭಯ ದೇಶಗಳ ಸಂಬಂಧಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು.

ಆದರೆ ಅಮೇರಿಕಾ ಅರಬ್ ವಲಯಗಳಲ್ಲಿ ತನ್ನ ಸೈನ್ಯವನ್ನು ವಿಸ್ತರಿಸಿ ಪ್ರದೇಶದಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಇರಾಕ್ ನ ಬಾಗ್ದಾದ್ ಗ್ರೀನ್ ಝೋನ್ ನಲ್ಲಿರುವ ತನ್ನ ರಾಯಭಾರಿ ಕಚೇರಿಯ ಒಂದು ಮೈಲ್ ಸಮೀಪದಲ್ಲೇ ರಾಕೆಟ್ ಇಳಿಸಿ ಇರಾನ್ ಗೆ ಎಚ್ಚರಿಕೆಯನ್ನು ರವಾನಿಸಿದ ಟ್ರಂಪ್, “ಇರಾನ್ ಸಮರವನ್ನು ಬಯಸುವುದಾದರೆ ಅದು ಇರಾನಿನ ಅಧಿಕೃತ ಅಂತ್ಯವಾಗಿದೆ, ಆದ್ದರಿಂದ ಅಮೇರಿಕಾವನ್ನು ಕೆದಕಲು ಮುಂದಾಗಬೇಡಿ” ಎಂದು ಟ್ವೀಟ್ ಮಾಡಿದ್ದಾರೆ.

‘ಅಮೆರಿಕದ ಜತೆ ಸಂಪೂರ್ಣವಾಗಿ ಬೇಹುಗಾರಿಕೆಯ ಯುದ್ದದಲ್ಲಿ ಸದ್ಯಕ್ಕೆ ತೊಡಗಿದ್ದೇವೆ. ಇದು ಮಾನಸಿಕ ಯುದ್ಧ, ಸೈಬರ್‌ ಕಾರ್ಯಾಚರಣೆ, ಸೇನೆಯನ್ನು ನಿಯೋಜಿಸುವುದು ಮತ್ತು ಭೀತಿ ಮೂಡಿಸುವುದಾಗಿದೆ’ ಎಂದು ಇರಾನ್‌ ಸೇನೆ ಮುಖ್ಯಸ್ಥ ಹೊಸೈನ್‌ ಸಲಾಮಿ ಅವರು ಶನಿವಾರ ಹೇಳಿಕೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!