janadhvani

Kannada Online News Paper

ಎಸ್ಸೆಸ್ಸೆಫ್ ತೌಡುಗೊಳಿ ವತಿಯಿಂದ ಪಕ್ಷಿಗೊಂದು ಹನಿ ನೀರು ಅಭಿಯಾನ ಹಾಗೂ ರಂಝಾನ್ ಸ್ಟಡಿ ಕ್ಲಾಸ್

ತೌಡುಗೊಳಿ, ಮೇ 12: ಎಸ್ಸೆಸ್ಸೆಫ್ ತೌಡುಗೊಳಿ ಶಾಖಾ ವತಿಯಿಂದ ಪಕ್ಷಿಗೊಂದು ಹನಿ ನೀರು ಅಭಿಯಾನ ಕಾರ್ಯಕ್ರಮವು ತೌಡು ಗೊಳಿ ಪರಿಸರದಲ್ಲಿ ಉಮರುಲ್ ಫಾರೂಕ್ ಸುನ್ನಂಗಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತೌಡುಗೋಳಿ ಜುಮಾ ಮಸೀದಿ ಕತೀಬ್ ಅಬ್ದುಲ್ ಹಮೀದ್ ಸಖಾಫಿಯವರು ಬೇಸಿಗೆ ಕಾಲದಲ್ಲಿ ನೀರಿಲ್ಲದೆ ಮೂಕ ಪ್ರಾಣಿ ಪಕ್ಷಿಗಳು ಸಾವಿನಂಚಿನಲ್ಲಿದೆ ನಾವು ಅದರ ರಕ್ಷಣೆ ಮಾಡಬೇಕಾಗಿದೆ ಎಂದು
ಯುವಕರಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಮುಡಿಪು ಡಿವಿಜನ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಮಾತನಾಡುತ್ತಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ತಾಪಕ್ಕೆ ಎಲ್ಲಾ ಜೀವಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ನೀರಿಗಾಗಿ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರಿತ ಪ್ರಾಣಿ, ಪಕ್ಷಿಗಳ ಸಂಕಷ್ಟ ಅರಿತು ರಕ್ಷಣೆ ಮಾಡಲು ಇಲ್ಲಿಯ ಎಸ್ಸೆಸ್ಸೆಫ್ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಆ ಮೂಲಕ ಮಾನವ ಧರ್ಮಕ್ಕೆ ಮುನ್ನಡೆ ಬರೆದಿದ್ದಾರೆ.

ತಾಲ್ಲೂಕಿನಾದ್ಯಂತ ದಾಖಲೆ ಪ್ರಮಾಣದಲ್ಲಿ ಬಿಸಿಲಿನ ತಾಪಮಾನವಿದೆ. ಜಲಮೂಲಗಳು ಬತ್ತಿವೆ. ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾಗಿದೆ. ಇದು ಸಣ್ಣ ಪಕ್ಷಿ, ಪ್ರಾಣಿಗಳ ಬದುಕಿಗೆ ಮಾರಕ ವಾಗಿದೆ. ನೀರಿಲ್ಲದೆ ಪಕ್ಷಿಗಳು ಜೀವ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ.

ಪ್ರಾಣಿ, ಪಕ್ಷಿಗಳ ಈ ಸಮಸ್ಯೆ ಕಂಡ ಇಲ್ಲಿಯ ಎಸ್ಸೆಸ್ಸೆಫ್ ವಿದ್ಯಾರ್ಥಿಗಳು, ಅವರುಗಳ ರಕ್ಷಣೆಗಾಗಿ ತಮ್ಮ ಶೈಲಿಯಲ್ಲಿ ನೆರವಿನ ಹಸ್ತ ಕೈಚಾಚಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಫೀಕ್ ತೌಡುಗೋಳಿ,ಉಮರುಲ್ ಫಾರೂಕ್,ಮೊಯಿದಿನ್ ಕುಂಞ ಬಲಪು ,ಬದುರುದ್ಧೀನ್ ಬಲಪು, ಸಿದ್ದೀಕ್ ಬವಲಗುರಿ , ಅನೀಫ್ ತೌಡುಗೋಳಿ ಮುಂತಾದಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೇಯಲ್ಲಿ ಮಸೂದ್ ಬಾಹ್ಶನಿ ಉಸ್ತಾದರು ಕಾರ್ಯಕ್ರಮಕ್ಕೆ ಆಗಮಸಿದ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು.

error: Content is protected !! Not allowed copy content from janadhvani.com